Election

ಪ್ರಚಾರ ನಿರ್ಬಂಧ ವಿರೋಧಿಸಿ ದೀದಿ ಪ್ರತಿಭಟನೆ

ಕೋಲ್ಕತ್ತ: ಚುನಾವಣಾ ಪ್ರಚಾರ ಮಾಡದಂತೆ ನಿರ್ಬಂಧ ಹೇರಿರುವ ಚುನಾವಣಾ ಆಯೋಗದ ಕ್ರಮವನ್ನು ವಿರೋಧಿಸಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಧರಣಿ ನಡೆಸಿದ್ದಾರೆ.
ಕೋಲ್ಕತ್ತಾದ ಹೃದಯ ಭಾಗದಲ್ಲಿ ಮಮತಾ ಬ್ಯಾನರ್ಜಿ ಧರಣಿ ಪ್ರಾರಂಭಿಸಿದ್ದು, ತಮಗೆ ಚುನಾವಣಾ ಪ್ರಚಾರ ಮಾಡುವುದರಿಂದ 24 ಗಂಟೆಗಳ ಕಾಲ ನಿಷೇಧಿಸಿರುವ ಆಯೋಗದ ಕ್ರಮ ಅಸಾಂವಿಧಾನಿಕ ಎಂದು ಟೀಕಿಸಿದ್ದಾರೆ.
ವ್ಹೀಲ್ ಚೇರ್ ನಲ್ಲೇ ಮಹಾತ್ಮಾ ಗಾಂಧಿ ಪುತ್ಥಳಿಯ ಬಳಿ ಕುಳಿತು ಪ್ರತಿಭಟನೆ ನಡೆಸುತ್ತಿರುವ ಮಮತಾ ಬ್ಯಾನರ್ಜಿ ಗೆ ಬೇರೆ ಯಾವುದೇ ಪಕ್ಷದ ಮುಖಂಡರೂ ಸಾಥ್ ನೀಡಿಲ್ಲ. ಟಿಎಂಸಿ ಅಥವಾ ಇನ್ನಿತರ ಯಾವುದೇ ಪಕ್ಷದ ಮುಖಂಡರೂ ಸಹ ಸ್ಥಳದಲ್ಲಿ ಇಲ್ಲ, ಮಮತಾ ಬ್ಯಾನರ್ಜಿಯೊಬರೇ ಸ್ಥಳದಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಪಕ್ಷದ ನಾಯಕರೊಬ್ಬರು ಮಾಹಿತಿ ನೀಡಿದ್ದಾರೆ.
ಚುನಾವಣೆಯಲ್ಲಿ ಧರ್ಮದ ಆಧಾರದಲ್ಲಿ ಮತಯಾಚನೆ ಮಾಡಿದ್ದು ಹಾಗೂ ಕೇಂದ್ರ ಪಡೆಗಳ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ ಮಮತಾ ಬ್ಯಾನರ್ಜಿ ಅವರಿಗೆ ಚುನಾವಣಾ ಆಯೋಗ 24 ಗಂಟೆಗಳ ಕಾಲ ಪ್ರಚಾರ ನಡೆಸದಂತೆ ನಿರ್ಬಂಧÀ ವಿಧಿಸಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button