BidarElection

ಎರಡನೇ ಹಂತದ ಪೂರ್ವಭಾವಿ ಚುನಾವಣಾ ತರಬೇತಿ : ರಾಮಚಂದ್ರನ್ ಆರ್

ಪ್ರಜಾಪ್ರಭುತ್ವದ ಹಬ್ಬದಲ್ಲಿ ಸಕ್ರೀಯ ಭಾಗಿಯಾಗೋಣ: ರಾಮಚಂದ್ರನ್ ಆರ್
ಬೀದರ್ ಏಪ್ರಿಲ್ ೧೩ (ಕರ್ನಾಟಕ ವಾರ್ತೆ): ಪ್ರಜಾಪ್ರಭುತ್ವದ ಹಬ್ಬ ಎಂದೇ ಪರಿಗಣ ಸಲಾಗಿರುವ ಚುನಾವಣೆಯ ಪ್ರಕ್ರಿಯೆಯಲ್ಲಿ ಸಕ್ರಿಯರಾಗಿ ಭಾಗಿಯಾಗಬೇಕು. ಭಾರತ ಚುನಾವಣಾ ಆಯೋಗದ ಸೂಚನೆಯಂತೆ ಚುನಾವಣೆಯು ಸುಗಮ ಮತ್ತು ಯಶಸ್ವಿಯಾಗಿ ನಡೆಯಲು ಅಧಿಕಾರಿಗಳು ಮತ್ತು ಸಿಬ್ಬಂದಿಯು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ತಿಳಿಸಿದರು.
ನಗರದ ಪೂಜ್ಯ ಶ್ರೀ ಡಾ.ಚೆನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮAದಿರದಲ್ಲಿ ಇತ್ತೀಚೆಗೆ ಮತಗಟ್ಟೆ ಅಧಿಕಾರಿಗಳು, ಸಹಾಯಕ ಮತಗಟ್ಟೆ ಅಧಿಕಾರಿಗಳು ಮತ್ತು ಇನ್ನೀತರ ಸಿಬ್ಬಂದಿಗೆ ನಡೆದ ಎರಡನೇ ಹಂತದ ಪೂರ್ವಭಾವಿ ಚುನಾವಣಾ ತರಬೇತಿಯಲ್ಲಿ ಅವರು ಮಾತನಾಡಿದರು.

DSC 0078 Bidar, Election


ಅಧಿಕಾರಿಗಳು ಚುನಾವಣೆ ಕರ್ತವ್ಯವನ್ನು ಅತ್ಯಂತ ಜವಾಬ್ದಾರಿಯುತವಾಗಿ ನಿರ್ವಹಿಸಬೇಕು. ಯಾವುದೇ ಲೋಪದೋಷಗಳಾಗದಂತೆ ಕಾರ್ಯನಿರ್ವಹಿಸಬೇಕು. ಏಪ್ರೀಲ್ ೧೭ರಂದು ಬೆಳಗ್ಗೆ ೭ರಿಂದ ಸಂಜೆ ೭ ಗಂಟೆವರೆಗೆ ಮತದಾನ ನಡೆಯಲಿದೆ. ಬೆಳಗ್ಗೆ ೬.೩೦ರೊಳಗೆ ಕನಿಷ್ಟ ೫೦ ಮತಗಳಿಂದ ಅಣಕು ಮತದಾನ ಮುಗಿಸಿದ ಬಳಿಕ ಬೆಳಗ್ಗೆ ೭ಕ್ಕೆ ಮತದಾನ ಪ್ರಾರಂಭಿಸಬೇಕು. ಸಂಜೆ ೭ ಗಂಟೆಗೆ ಮತದಾನವನ್ನು ಮುಕ್ತಾಯಗೊಳಿಸಬೇಕು. ಮತದಾರರು ಇನ್ನೂ ಬಾಕಿ ಇದ್ದಲ್ಲಿ ಸಾಲಿನಲ್ಲಿರುವವರಿಗೆ ಕೊನೆಯಿಂದ ಕ್ರಮ ಸಂಖ್ಯೆ ಚೀಟಿ ನೀಡಿ ಮತದಾನಕ್ಕೆ ಅವಕಾಶ ನೀಡಬೇಕು ಎನ್ನುವ ನಿಯಮವನ್ನು ಪಾಲನೆ ಮಾಡಬೇಕು ಎಂದು ತಿಳಿಸಿದರು.
ಮತಗಟ್ಟೆ ವ್ಯವಸ್ಥೆ ಸರಿಯಾಗಿರಬೇಕು. ನೋಟೀಸ್ ಬೋರ್ಡನಲ್ಲಿ ಮತದಾನದ ಪ್ರದೇಶವನ್ನು ನಿರ್ದಿಷ್ಠಪಡಿಸಿದ ನೋಟಿಸನ್ನು ಮತ್ತು ಮತಗಟ್ಟೆಯಲ್ಲಿ ಮತ ಚಲಾಯಿಸುವ ಮತದಾರರ ವಿವರ ಮತ್ತು ಮತದಾನದ ಸಮಯ ಇರಬೇಕು. ನಮೂನೆಯಲ್ಲಿ ಸ್ಪರ್ದಿಸುವ ಉಮೇದುವಾರರ ಹೆಸರು ಮತ್ತು ಚಿನ್ಹೆಗಳ ವಿವರಗಳನ್ನು ಪ್ರದರ್ಶಿಸಬೇಕು. ಕೋವಿಡ್ ನಿಯಮಾವಳಿಯ ಪೋಸ್ಟರ್ ಹಾಕಬೇಕು. ಮತಗಟ್ಟೆ ಕೊಠಡಿಯಿಂದ ೧೦೦ ಮೀಟರ್ ಗುರುತು ಹಾಕಬೇಕು. ಮತ್ತು ಆ ವ್ಯಾಪ್ತಿಯ ಒಳಗಡೆ ಯಾವುದೇ ಪಕ್ಷದ ಅಥವಾ ಉಮೇದುವಾರರ ಭಿತ್ತಿ ಪತ್ರ ಪೋಸ್ರ‍್ಸ್ ಇತರೆ ಯಾವುದಾದರು ಇದ್ದಲ್ಲಿ ತೆಗೆದು ಹಾಕÀಲು ಕ್ರಮ ವಹಿಸಬೇಕು ಎಂದು ತಿಳಿಸಿದರು.
ವಿವಿಪ್ಯಾಟ್ ಯಂತ್ರ ಸಾಗಿಸುವಾಗ ಮತ್ತು ವಿವಿಪ್ಯಾಟ್ ಯಂತ್ರ ಬಳಸುವಾಗ ವಿಶೇಷ ಗಮನ ಹರಿಸಬೇಕು. ಚುನಾವಣೆಯಲ್ಲಿ ಬಳಸುವ ಬ್ಯಾಲೆಟ್ ಯುನಿಟ್, ವಿವಿಪ್ಯಾಟ್ ಯುನಿಟ್ ಮತ್ತು ಕಂಟ್ರೋಲ್ ಯುನಿಟ್‌ಗಳ ಬಳಕೆಯ ಬಗ್ಗೆ ಸರಿಯಾಗಿ ತಿಳಿದುಕೊಳ್ಳಬೇಕು. ಬ್ಯಾಲೆಟ್ ಯುನಿಟ್‌ನಲ್ಲಿ ಅಳವಡಿಸಿರುವ ಮತಪತ್ರ ಸರಿಯಾಗಿ ಪಂಕ್ತಿಕರಣಗೊಳಿಸಿರುವ ಬಗ್ಗೆ ಖಾತರಿಪಡಿಸಿಕೊಳ್ಳಬೇಕು. ಬ್ಯಾಲೆಟ್ ಯುನಿಟ್‌ನಲ್ಲಿ ಕಾಣುವ ಉಮೇದುವಾರರ ಬಟನ್‌ಗಳು ಸ್ಪರ್ಧಾ ಕಣದಲ್ಲಿರುವ ಅಭ್ಯರ್ಥಿಗಳ ಸಂಖ್ಯೆಗೆ ಸವiನಾಗಿರಬೇಕು. ಬ್ಯಾಲೆಟ್ ಯುನಿಟ್‌ನಲ್ಲಿ ಅಡ್ರೆಸ್ ಟ್ಯಾಗ್‌ನೊಂದಿಗೆ ಸೀಲ್ ಮಾಡಿರುವ ¨ಗ್ಗೆ ಖಾತರಿಪಡಿಸಿಕೊಳ್ಳಬೇಕು ಎಂದು ತಿಳಿಸಿದರು. ಬ್ಯಾಲೆಟ್ ಯುನಿಟದಲ್ಲಿ ಅಡ್ರೆಸ್ ಟ್ಯಾಗ್‌ನೊಂದಿಗೆ ಸೀಲ್ ಮಾಡಿರುವ ಬಗ್ಗೆ ಖಾತರಿಪಡಿಸಿಕೊಳ್ಳಬೇಕು ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳು ತಿಳಿಸಿದರು.
ಚುನಾವಣಾ ಸಾಮಗ್ರಿಗಳನ್ನು ಸರಿಯಾಗಿ ಪರಿಶೀಲಿಸಿ ಕೊಂಡೋಯ್ಯಬೇಕು. ಅಳಿಸಲಾಗದ ಶಾಯಿ ಮತ್ತು ಸ್ಟಾö್ಯಂಪ್ ಪ್ಯಾಡ್, ಟೆಂರ‍್ಡ್ ಮತಪತ್ರಗಳ ಕ್ರಮ ಸಂಖ್ಯೆಗಳು ಮತ್ತು ಯಾವುದೇ ರೀತಿ ದೋಷಪೂರ್ಣವಾಗಿಲ್ಲವೆಂಬುದನ್ನು ಪರಿಶೀಲಿಸಬೇಕು. ಸ್ಪರ್ಧಾ ಕಣದಲ್ಲಿರುವ ಉಮೇದುವಾರರ ಚುನಾವಣಾ ಏಜೆಂಟರುಗಳ ಮಾದರಿ ಸಹಿಯ ಪ್ರತಿಗಳು ಪಡೆದಿರುವ ಬಗ್ಗೆ ಖಾತರಿಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯಮಟ್ಟದ ಚುನಾವಣಾ ಮಾಸ್ಟರ್ ಟ್ರೇನರ್ ಗೌತಮ ಅರಳಿ ಅವರು ಮಾತನಾಡಿ, ಮೊದಲೇ ಪೊಲಿಂಗ್ ಅಧಿಕಾರಿಯು ಪುರುಷ ಮತದಾರರಾದಲ್ಲಿ ಅವರ ಹೆಸರಿನ ಕೆಳಗೆ ಅಡ್ಡ ಗೆರೆ ಎಳೆಯುವುದು ಮತ್ತು ಮಹಿಳಾ ಮತದಾರರಾದರೆ ಹೆಸರಿನ ಕೆಳಗೆ ಅಡ್ಡ ಗೆರೆ ಎಳೆದು ರೈಟ್ ಮಾರ್ಕ್ ಮಾಡುವುದು ಮತ್ತು ಇನ್ನೀತರ ಕಾರ್ಯ ನಿರ್ವಹಿಸಬೇಕು. ಎರಡನೇ ಪೊಲೀಂಗ್ ಅಧಿಕಾರಿಯು ೧೭ಎ ರಜಿಸ್ಟರ್‌ನಲ್ಲಿ ಪ್ರತಿಯೊಬ್ಬ ಮತದಾರನ ಸಹಿ ಹೆಬ್ಬಟ್ಟಿನ ಗುರುತು ತೆಗೆದುಕೊಳ್ಳಬೇಕು. ಎಡಗೈ ತೋರು ಬೆರಳಿನ ಉಗುರಿನ ತುದಿಯಿಂದ ಮೊದಲನೇ ಖಂಡಿಕೆಯವರೆಗೆ ಅಳಿಸಲಾಗದ ಶಾಯಿ ಹಾಕುವುದು ಸೇರಿದಂತೆ ಇನ್ನೀತರ ಕಾರ್ಯ ನಿರ್ವಹಿಸಬೇಕು. ಮೂರನೇ ಪೊಲೀಂಗ್ ಅಧಿಕಾರಿಯು ಎರಡನೇ ಪೋಲಿಂಗ್ ಅಧಿಕಾರಿ ನೀಡಿರುವ ಮತದಾರರ ಚೀಟಿಯನ್ನು ಪಡೆದುಕೊಂಡು ಎಡಗೈ ತೋರು ಬೆರಳಿನ ಶಾಯಿ ಗುರುತು ಪರಿಶೀಲಿಸಿಬೇಕು. ಮತ್ತು ಕಂಟ್ರೋಲ್ ಯುನಿಟ್‌ನಲ್ಲಿಯ ಬ್ಯಾಲಟ್ ಬಟನ್ ಒತ್ತುವ ಮೂಲಕ ಬ್ಯಾಲಟ್ ಯುನಿಟ್‌ನ್ನು ಕ್ರಿಯಾಶೀಲಗೊಳಿಸುವುದು ಸೇರಿದಂತೆ ಇನ್ನೀತರ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಬಸವಕಲ್ಯಾಣ ಸಹಾಯಕ ಆಯುಕ್ತರಾದ ಭುವನೇಶ ಪಾಟೀಲ, ತಹಸೀಲ್ದಾರ ಗಂಗಾದೇವಿ ಸಿ.ಎಚ್., ಚುನಾವಣಾ ಶಾಖೆಯ ಶಾಂತನು ಪೂರಂ ಸೇರಿದಂತೆ ಇನ್ನೀತರ ಸಿಬ್ಬಂದಿ ಇದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button