ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆ ಉಡುಪಿ ಜಿಲ್ಲೆಯ ಬೈಂದೂರು ಕ್ಷೇತ್ರದಲ್ಲಿ ಸಮಯ 11 ರ ಹೊತ್ತಿಗೆ ಶೇ.31.22 ಮತದಾನ

ಉಡುಪಿ: ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಎರಡನೇ ಹಂತದ ಮತದಾನ ಪ್ರಕ್ರಿಯೆ ಇಂದು ಆರಂಭಗೊಂಡಿದೆ.

ಮಧ್ಯಾಹ್ನ 11ಗಂಟೆಗೆ ಶೇಕಡ 31.22ರಷ್ಟು ಮತದಾನವಾಗಿದೆ.

ಬೆಳಗ್ಗೆ 9:00 ಸುಮಾರಿಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಒಟ್ಟು1752885 ಮತದಾರರ ಪೈಕಿ 200745 ಮಂದಿ ತಮ್ಮ ಹಕ್ಕನ್ನು ಚಲಾಯಿಸುವ ಮೂಲಕ ಶೇ. 11.45 ಮತದಾನವಾಗಿದ್ದು ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ.13.66 ಮತದಾನವಾಗಿರುವ ಬಗ್ಗೆ ವರದಿಯಾಗಿದೆ.
ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆ ಸಂಖ್ಯೆ 110 ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಕರಾವಳಿ ಮರವಂತೆಯಲ್ಲಿ ವಿಶೇಷ ಚೇತನ ಮಹಿಳೆ ಛಾಯಾದೇವಿಯವರು ವೀಲ್ ಚೇರ್ ಬಳಸಿಕೊಂಡು ಮತಗಟ್ಟೆ ಗೆ ತೆರಳಿ ಮತ ಚಲಾಯಿಸಿದರು.

IMG 20240507 WA0013 Election, KUNDAPURA

Latest Indian news

Popular Stories