ತೆಲಂಗಾಣ ಚುನಾವಣೆ: ಸಂಕಷ್ಟಕ್ಕೆ ಸಿಲುಕಿದ ಶರ್ಮಿಳಾ ಭವಿಷ್ಯ !

ವೈಎಸ್‌ಆರ್ ತೆಲಂಗಾಣ ಪಕ್ಷದ ಅಧ್ಯಕ್ಷೆ ಶರ್ಮಿಳಾ (ವೈಎಸ್ ಶರ್ಮಿಳಾ) ತೆಲಂಗಾಣದಲ್ಲಿ ಅಧಿಕಾರಕ್ಕೆ ಬರುವ ಗುರಿಯೊಂದಿಗೆ ಪಕ್ಷ ಸ್ಥಾಪಿಸಿ ಏಕಾಂಗಿಯಾಗಿ ರಾಜಕೀಯ ಪಯಣ ಆರಂಭಿಸಿದರು.

ಆಡಳಿತ ಪಕ್ಷ ಬಿಆರ್ ಎಸ್ ಪಕ್ಷದ ತಪ್ಪುಗಳನ್ನು ಎತ್ತಿ ಹಿಡಿದು ಜನರ ಗಮನ ಸೆಳೆಯಲು ಯತ್ನಿಸಿದರು. ಆದರೆ, ಪಕ್ಷದಲ್ಲಿ ನಿರೀಕ್ಷಿತ ಭಾಗವಹಿಸುವಿಕೆ ಇಲ್ಲದ ಕಾರಣ ಹಾಗೂ ಚುನಾವಣೆ ಸಮೀಪಿಸುತ್ತಿರುವ ಕಾರಣ ಕಾಂಗ್ರೆಸ್ ಜೊತೆ ಮೈತ್ರಿಗೆ ಯತ್ನಿಸಿದ್ದಾರೆ.

ಆದರೆ ವೈಎಸ್ ಆರ್ ತೆಲಂಗಾಣ ಪಕ್ಷವನ್ನು ಕಾಂಗ್ರೆಸ್ ನಲ್ಲಿ ವಿಲೀನ ಮಾಡಬೇಕಾದ ಪರಿಸ್ಥಿತಿ ಬಂದಿದ್ದು.ಅದಕ್ಕೆ ಶರ್ಮಿಳಾ ರೆಡಿಯಾಗಿದ್ದು, ಈಗ ಶರ್ಮಿಳಾ ತೆಲಂಗಾಣದಲ್ಲಿ ರಾಜಕೀಯ ಮಾಡಲು ಸಾಧ್ಯವಿಲ್ಲ ಎಂದು ತೆಲಂಗಾಣ ಕಾಂಗ್ರೆಸ್ ನಾಯಕರು ಪದೇ ಪದೇ ಹೇಳುತ್ತಿದ್ದಾರೆ. ಎಪಿಯಲ್ಲಿ ಕಾಂಗ್ರೆಸ್‌ನ ಜವಾಬ್ದಾರಿಯನ್ನು ನೋಡಿಕೊಳ್ಳಬೇಕು.

ಮತ್ತು ಕಾಂಗ್ರೆಸ್ ನಾಯಕತ್ವ ಕೂಡ ಇದೇ ನಿರ್ಧಾರಕ್ಕೆ ಬಂದಿರುವುದರಿಂದ ಶರ್ಮಿಳಾ ಪರಿಸ್ಥಿತಿ ಬದಲಾಗಿದೆ. ಈಗ ಮತ್ತೆ ತಮ್ಮ ಪಕ್ಷವನ್ನು ಕ್ರಿಯಾಶೀಲಗೊಳಿಸಲು ಸಾಧ್ಯವಾಗುತ್ತಿಲ್ಲ. ಹಾಗೆಂದು ಹೇಳುವುದಾದರೆ, ಪಕ್ಷವನ್ನು ಕಾಂಗ್ರೆಸ್‌ನಲ್ಲಿ ವಿಲೀನಗೊಳಿಸಿದರೂ, ತೆಲಂಗಾಣದಲ್ಲಿ ಆಕೆಗೆ ರಾಜಕೀಯ ಮಾಡಲು ಸೂಕ್ತ ಪರಿಸ್ಥಿತಿಗಳು ಕಾಂಗ್ರೆಸ್‌ನಲ್ಲಿ ಕಂಡುಬರುತ್ತಿಲ್ಲ. ಹಾಗಾಗಿ ಶರ್ಮಿಳಾ ರಾಜಕೀಯ ಭವಿಷ್ಯದ ಬಗ್ಗೆ ಗೊಂದಲದಲ್ಲಿದ್ದಾರೆ.

ತೆಲಂಗಾಣ ಕಾಂಗ್ರೆಸ್ ನಾಯಕರು ವೈಎಸ್ಆರ್ ತೆಲಂಗಾಣ ಪಕ್ಷವನ್ನು ಮೂಲ ಕಾಂಗ್ರೆಸ್‌ನಲ್ಲಿ ವಿಲೀನಗೊಳಿಸಲು ಶರ್ಮಿಳಾ ಅವರನ್ನು ತೆಲಂಗಾಣ ರಾಜಕೀಯಕ್ಕೆ ತರಲು ಬಯಸುವುದಿಲ್ಲ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಾಲೇರು ಕ್ಷೇತ್ರದಿಂದ ಸ್ಪರ್ಧಿಸಿ ಗೆಲ್ಲಲೇಬೇಕೆಂದು ಶರ್ಮಿಳಾ ಸಂಕಲ್ಪ ಮಾಡಿದ್ದರೂ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಇಲ್ಲ. ಈಗಾಗಲೇ ಹಲವು ಕಾಂಗ್ರೆಸ್ ನಾಯಕರು ಅವರನ್ನು ಗುರಿಯಾಗಿಸಿಕೊಂಡು ಟೀಕೆ ಮಾಡುತ್ತಿದ್ದಾರೆ.

ಅದರಲ್ಲೂ ಮಾಜಿ ಕೇಂದ್ರ ಸಚಿವೆ ರೇಣುಕಾ ಚೌಧರಿ ಶರ್ಮಿಳಾ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಪಕ್ಷ ಸ್ಥಾಪಿಸಿ ಅಪಾರ ಹಣ ಖರ್ಚು ಮಾಡಿ, ಸ್ವಂತವಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು, 3000 ಕಿ.ಮೀ ಪಾದಯಾತ್ರೆ ನಡೆಸಿದ ಶರ್ಮಿಳಾ ನಡೆಸಿದ್ದರು ,ಎಪಿ ರಾಜಕೀಯಕ್ಕೆ ಹೋಗಲು ಸಾಧ್ಯವಾಗದಿರುವುದು ಹಾಗೂ ತೆಲಂಗಾಣ ಕಾಂಗ್ರೆಸ್ ನಾಯಕರಿಂದ ಬರುತ್ತಿರುವ ವಿರೋಧ ಶರ್ಮಿಳಾಗೆ ಮತ್ತಷ್ಟು ಗೊಂದಲ ಮೂಡಿಸಿದೆ.

ಅದರೆ ಕಾದು ನೋಡಬೇಕು ಶರ್ಮಿಳ್ ಯಾವ ಪಕ್ಷದ ಜೊತೆ ಕೈ ಜೋಡಿಸುತ್ತಾರೆ ?

ಬ್ಯುರೋ ರಿರ್ಪೋಟ್
ಹಣಮಂತ ದೇಶಮುಖ
THG ತೆಲುಗು

Latest Indian news

Popular Stories