ಭೂಪಾಲ್ ರೆಡ್ಡಿಯವರನ್ನು ಸೋಲಿಸುತ್ತಾರೆಯೇ ಪತ್ರಕರ್ತ ಸಂಗಪ್ಪ ?
ಒಡೆದ ಮನೆಯಾದ ಕಾಂಗ್ರೆಸ್ ಒಂದಾಗುತ್ತಾ ?
ನಾರಾಯಣಖೇಡ್ : ಕ್ಷೇತ್ರದಲ್ಲಿ ಈಗಷ್ಟೇ ರಾಜಕೀಯ ಬಿಸಿ ಶುರುವಾಗಿದೆ. ಆಡಳಿತಾರೂಢ ಬಿಆರ್ ಎಸ್ ಜತೆಗೆ ಬಿಜೆಪಿ ಮತ್ತು ಕಾಂಗ್ರೆಸ್ ನಲ್ಲಿ ಆಕಾಂಕ್ಷಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಾಲಿ ಶಾಸಕ ಭೂಪಾಲ್ ರೆಡ್ಡಿ (ಮಹಾರೆಡ್ಡಿ ಭೂಪಾಲ್ ರೆಡ್ಡಿ) ಮತ್ತೊಮ್ಮೆ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಮತ್ತು ಈ ಬಾರಿ ಭೂಪಾಲ್ ರೆಡ್ಡಿಯನ್ನು ಸೋಲಿಸುವ ನಾಯಕ ಯಾರು? ಯಾವ ಪಕ್ಷದಿಂದ ಯಾರು ಸ್ಪರ್ಧಿಸುತ್ತಾರೆ? ಈ ಬಾರಿ ನಾರಾಯಣಖೇಡ್ ಕ್ಷೇತ್ರದಲ್ಲಿ ಯಾರು ವಿಜಯ ಪತಾಕಿ ಹಾರಿಸಲಿದ್ದಾರೆ ?
ನಾರಾಯಣಖೇಡ್ ಕ್ಷೇತ್ರದಲ್ಲಿ ಇದುವರೆಗೆ 15 ಚುನಾವಣೆಗಳೂ ನಡೆದಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಒಂಬತ್ತು ಬಾರಿ ಗೆದ್ದಿದ್ದಾರೆ. ಮೂರು ಬಾರಿ ಪಕ್ಷೇತರರು ಗೆದ್ದಿದ್ದರೆ, ಟಿಡಿಪಿ ಒಂದು ಬಾರಿ ಗೆದ್ದಿದೆ. 2016ರಲ್ಲಿ ನಡೆದ ಉಪಚುನಾವಣೆಯಿಂದ ಬಿಆರ್‌ಎಸ್ ಗೆಲುವಿನ ಓಟ ಮುಂದುವರಿದಿದೆ. 1957ರಲ್ಲಿ ಮೊದಲ ಚುನಾವಣೆ ನಡೆದಿದ್ದು ಕಾಂಗ್ರೆಸ್ ಅಭ್ಯರ್ಥಿ ಅಪ್ಪಾರಾವ್ ಶೆಟ್ಕರ್ ಗೆಲುವು ಸಾಧಿಸಿದ್ದರು.
1989 ರಿಂದ, ಕಿಷ್ಟಾರೆಡ್ಡಿ ಸರಣಿ ಗೆಲುವಿನೊಂದಿಗೆ ಹಿಡಿತವನ್ನು ಸಾಧಿಸಿದ್ದರು . 2016ರಲ್ಲಿ ಕಿಷ್ಟಾರೆಡ್ಡಿ ಅವರ ಹಠಾತ್ ನಿಧನದ ನಂತರ ಉಪಚುನಾವಣೆಯಲ್ಲಿ ಬಿಆರ್ ಎಸ್ ಪಕ್ಷದ ಅಭ್ಯರ್ಥಿ ಭೂಪಾಲ್ ರೆಡ್ಡಿ ಗೆದ್ದು ಕ್ಷೇತ್ರವನ್ನು ತಮ್ಮ ಭದ್ರಕೋಟೆಯನ್ನಾಗಿ ಮಾಡಿಕೊಂಡಿದ್ದರು. ಭೂಪಾಲ್ ರೆಡ್ಡಿ ಸತತ ಗೆಲುವಿನೊಂದಿಗೆ ಅಜೇಯ ನಾಯಕರಾದರು.
ಕ್ಷೇತ್ರವು ನಾರಾಯಣಖೇಡ್ ಪುರಸಭೆ ಮತ್ತು ಹೊಸದಾಗಿ ರಚನೆಯಾದ ಮಣೂರು, ನಾಗಲ್ ಗಿಡ್ಡ, ಕಲ್ಹೇರ್, ಸಿರ್ಗಾಪುರ ಮತ್ತು ಕಂಗ್ಟಿ ನಿಜಾಂಪೇಟ್ ಮಂಡಲಗಳನ್ನು ಒಳಗೊಂಡಿದೆ. ನಗರಸಭೆ ಹೊರತು ಪಡಿಸಿ ಎಲ್ಲ ಮಂಡಲಗಳಲ್ಲೂ ಬಿಆರ್ ಎಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಮತದಾರ ವಿವರ
ಒಟ್ಟು 2 ಲಕ್ಷದ 5 ಸಾವಿರದ 669 ಮತದಾರರಲ್ಲಿ 1,04,272 ಪುರುಷರು ಮತ್ತು 1,01,390 ಮಹಿಳೆಯರು. 1957ರಿಂದ 2014ರವರೆಗೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಪ್ರಾಬಲ್ಯವನ್ನು ಉಳಿಸಿಕೊಂಡಿತ್ತು. 2016 ರಿಂದ, BRS ತಡೆಯಲಾಗದ ಶಕ್ತಿಯಾಗಿದೆ.
ಕಳೆದ ಬಾರಿ ಎರಡು ಬಾರಿ ಗೆದ್ದಿದ್ದ ಬಿಆರ್ ಎಸ್ ನ್ನು ಸೋಲಿಸಿ ಮತ್ತೆ ತನ್ನ ಹಳೆ ಕೋಟೆಯಲ್ಲಿ ನೆಲೆಯೂರಲು ಕಾಂಗ್ರೆಸ್ ಹವಣಿಸುತ್ತಿದೆ, ಒಂದು ಕಾಲದಲ್ಲಿ ನಾರಾಯಣಖೇಡ್ ನಲ್ಲಿ ಕಾಂಗ್ರೆಸ್ ಬಲಿಷ್ಠವಾಗಿತ್ತು. 2014ರಲ್ಲಿಯೂ ಸಹ ಪಕ್ಷ ಕಾಂಗ್ರೆಸ್ ಗೆದ್ದಿದ್ದರೂ 2016ರ ಉಪಚುನಾವಣೆಯಲ್ಲಿ ಅವರ ಹಠಾತ್ ನಿಧನದಿಂದ ನಡೆದ ಉಪಚುನಾವಣೆಯ್ಲಲಿ ಬಿಆರ್‌ಎಸ್ ಗೆಲವು ಸಾಧಿಸಿದೆ. ಆದರೆ ಕಾಂಗ್ರೆಸ್ ಮೇಲೇರುತ್ತಿರುವಂತೆ ಕಂಡರೂ ಗುಂಪು ರಾಜಕಾರಣ ಪಕ್ಷಕ್ಕೆ ಮುಜುಗರ ತರುತ್ತಿದೆ,
ಡಾ.ಸಂಜೀವ್ ರೆಡ್ಡಿ ಹಾಗೂ ಮಾಜಿ ಶಾಸಕ ಸುರೇಶ ಶೆಟಕಾರ್ ನಡುವೆ ಕಿತ್ತಾಟ ನಡೆಯುತ್ತಿರುವುದರಿಂದ ಪಕ್ಷದ ಪರಿಸ್ಥಿತಿ ದುಸ್ತರವಾಗಿದೆ,
ಈ ಎರಡು ಬಣಗಳ ನಡುವೆ ರಾಜಿ ಯತ್ನ ನಡೆದರೂ ಯಾರೂ ಹಿಂದೆ ಸರಿಯಲಿಲ್ಲ. ಅದರೂ ಕೂಡ ಈ ಬಾರಿ ಕಾಂಗ್ರೆಸ್ ಗೆಲುತ್ತೆ ಅನ್ನುತ್ತಿದ್ದಾರೆ ಕ್ರಾಂಗೆಸ್ ನ ಸಳ್ಥೀಯ ಕಾಂಗ್ರೆಸ್ ನಾಯಕರು
ಮತ್ತು ಇಲ್ಲಿ ಬಿಜೆಪಿ ಸ್ವಲ್ಪ ದುರ್ಬಲವಾಗಿದೆ. ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದರೂ ಬಿಆರ್ ಎಸ್, ಕಾಂಗ್ರೆಸ್ ನಂತರದ ಸ್ಥಾನ ಬಿಜೆಪಿ ಪಾಲಾಗಿದೆ ಎಂಬ ವಿಶ್ಲೇಷಣೆಗಳೂ ಇವೆ. ಪ್ರಮುಖವಾಗಿ ಕಾಂಗ್ರೆಸ್ ಮತ್ತು ಬಿಆರ್‌ಎಸ್ ನಡುವೆ ಪೈಪೋಟಿ ನಡೆಯಲಿದೆ ಎಂದು ಕ್ಷೇತ್ರದ ಜನರು ಹೇಳುತ್ತಿದ್ದಾರೆ,
ವಿ 6 ಚಾನೆಲ್ ನ ಮಾಜಿ ಪತ್ರಕರ್ತ ಸಂಗಪ್ಪ, ಹಾಲಿ ಶಾಸಕ ಭೂಪಾಲ್ ರೆಡ್ಡಿ ಸಹೋದರ ವಿಜಯಪಾಲ್ ರೆಡ್ಡಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯ ಹೆಚ್ಚಿರುವುದು ಹಾಗೂ ಇಪ್ಪತ್ತು ವರ್ಷಗಳ ಕಾಲ ಪತ್ರಕರ್ತರಾಗಿ ಸಾರ್ವಜನಿಕ ಸಮಸ್ಯೆಗಳ ಅರಿವು ಹೊಂದಿರುವ ಪತ್ರಕರ್ತ ಸಂಗಪ್ಪ ಗೆ ಟಿಕೆಟ್ ನೀಡಿದ್ದರೆ ಬಿಜೆಪಿ ಗೆಲ್ಲಬಹುದು ಎನ್ನುತ್ತಾರೆ ಬಿಜೆಪಿ ಮುಖಂಡರು
ಒಟ್ಟಿನಲ್ಲಿ ಹಾಲಿ ಶಾಸಕ ಭೂಪಾಲ್ ರೆಡ್ಡಿ ಮತ್ತೊಮ್ಮೆ ಗೆದ್ದು ಹ್ಯಾಟ್ರಿಕ್ ಸಾಧಿಸುವ ಹಂಬಲದಲ್ಲಿದ್ದು, ಮತ್ತೋಮ್ಮೆ ಚುನಾವಣಾ ತಯಾರಿ ನಡೆಸಿದ್ದಾರೆ ಅದರೆ ಯಾವುದೇ ಪಕ್ಷದಿಂದ ಯಾರೇ ಕಣದಲ್ಲಿದ್ದರೂ ಬಿಆರ್ ಎಸ್ ಹಾಗೂ ಕಾಂಗ್ರೆಸ್ ನಡುವೆ ಈ ಬಾರಿ ತೀವ್ರ ಪೈಪೋಟಿ ಏರ್ಪಡುವ ಸಾಧ್ಯತೆ ಇದೆ.ಅದರೆ ಒಂದು ವೇಳೆ ಸಂಗಪ್ಪ ಅವರಿಗೆ ಬಿಜೆಪಿ ಟಿಕೆಟ್ ನೀಡಿದ್ದರೆ ಮಾತ್ರ ತ್ರೀಕೋನ ಸ್ಪರ್ಧೆ ನಡೆಯಬಹುದು ಎನ್ನುತ್ತಾರೆ ಬಿಜೆಪಿಯ ಯುವಕರು
ಬ್ಯುರೋ ರಿಪೋರ್ಟ್
ಹಣಮಂತ ದೇಶಮುಖ
THG ಬೆಂಗಳೂರು