ರಾಜ್ಯದಲ್ಲಿ ಲೋಕಸಭಾ ಚುನಾವಣೆ ಮತದಾನ ಪ್ರಕ್ರಿಯೆ ಅಂತ್ಯ

ಇಂದು ಬೆಳಗ್ಗೆ 07ಗಂಟೆಯಿಂದ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ನಡೆದಿದ್ದ ಮತದಾನ ಪ್ರಕ್ರಿಯೆ ಸಂಜೆ 6 ಗಂಟೆಗೆ ಮುಕ್ತಾಯವಾಗಿದೆ. ಮತಗಟ್ಟೆ ಆವರಣದಲ್ಲಿ ಸರತಿ ಸಾಲಿನಲ್ಲಿ ನಿಂತಿರುವವರಿಗೆ ಮಾತ್ರ ಮತದಾನಕ್ಕೆ ಅವಕಾಶವಿರುತ್ತದೆ. ಇನ್ನುಳಿದಂತೆ ಯಾರಿಗೂ ಮತದಾನಕ್ಕೆ ಅವಕಾಶ ಇರುವುದಿಲ್ಲ. ಮತಗಟ್ಟೆಯಲ್ಲಿರುವವರು ಮತ ಹಾಕಿದ ಬಳಿಕ ಚುನಾವಣಾ ಸಿಬ್ಬಂದಿ ಮತಯಂತ್ರಗಳನ್ನು ಕ್ಲೋಸ್ ಮಾಡಿ ಬಿಗಿ ಭದ್ರತೆಯಲ್ಲಿ ಸ್ಟ್ರಾಂಗ್ ರೂಮ್​ಗೆ ಕೊಂಡೊಯ್ಯಲಿದ್ದಾರೆ.

ರಾಜ್ಯದಲ್ಲಾದ ಕ್ಷೇತ್ರಾವಾರು ಮತದಾನದ ಪಕ್ಕ ಲೆಕ್ಕಚಾರ ಕೆಲವೇ ಕ್ಷಣದಲ್ಲಿ ತಿಳಿದು ಬರಲಿದೆ.

Latest Indian news

Popular Stories