ಕುಂದಾಪುರ: ಸಿದ್ದಾಪುರ ಮಾರುಕಟ್ಟೆ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡು ಮೂರು ಅಂಗಡಿಗಳು ಸುಟ್ಟು ಭಸ್ಮ

ಕುಂದಾಪುರ: ಶಾರ್ಟ್ ಸರ್ಕ್ಯೂಟ್ ನಿಂದ ಸಂಭವಿಸಿದ ಅಗ್ನಿ ಅವಘಡಲ್ಲಿ ಎರಡು ಅಂಗಡಿಗಳು ಸುಟ್ಟು ಕರಕಲಾದ ಘಟನೆಯಲ್ಲಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಕುಂದಾಪುರ ತಾಲೂಕಿನ ಸಿದ್ದಾಪುರದಲ್ಲಿ ಸೋಮವಾರ ರಾತ್ರಿ ಸುಮಾರು 11.30ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ.

ಅಗ್ನಿ ಅವಘಡದಿಂದ ಸ್ಪೇರ್ ಪಾರ್ಟ್ಸ್ ಅಂಗಡಿ ಅದೇ ಕಟ್ಟಡದಲ್ಲಿದ್ದ ನಂದಿನಿ ಮಿಲ್ಕ್ ಪಾರ್ಲರ್ ಸುಟ್ಟು ಕರಕಲಾಗಿದೆ. ಅಲ್ಲದೆ ಸ್ಪೇರ್ ಪಾರ್ಟ್ಸ್ ಅಂಗಡಿಯಲ್ಲಿದ್ದ ಬಿಡಿಭಾಗಗಳು, ಟಯರ್, ಆಯಿಲ್ ಡಬ್ಬಗಳು ಸೇರಿ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟುಹೋಗಿವೆ.

IMG 20240507 WA0036 Accident News, KUNDAPURA IMG 20240507 WA0037 Accident News, KUNDAPURA IMG 20240507 WA0035 Accident News, KUNDAPURA

ಅದೇ ರೀತಿ ನಂದಿನಿ ಪಾರ್ಲರ್ ನಲ್ಲಿದ್ದ ನಂದಿನಿ ಉತ್ಪನ್ನಗಳು ಫ್ರಿಡ್ಜ್‌ ಗಳು ಸೇರಿ ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿದೆ.
ಬೆಂಕಿ ಅವಘಡ ಸಂಭವಿಸಿದ ಕೂಡಲೇ ಸ್ಥಳೀಯರು ಸೇರಿ ಬೆಂಕಿ ನಂದಿಸಲು ಪ್ರಯತ್ನ ಪಟ್ಟಿದ್ದಾರೆ ಆದರೆ ಬೆಂಕಿಯು ಹತೋಟಿಗೆ ಬಾರದ ಹಿನ್ನೆಲೆಯಲ್ಲಿ ಅಗ್ನಿಶಾಮಕಕ್ಕೆ ಮಾಹಿತಿ ನೀಡಲಾಗಿದೆ. ಅಗ್ನಿ ಶಾಮಕ ವಾಹನ ಬರುವಷ್ಟೋತ್ತಿಗಾಗಲೇ ಬೆಂಕಿ ಇಡೀ ಕಟ್ಟಡಕ್ಕೆ ವ್ಯಾಪಿಸಿತ್ತು ಬಳಿಕ ಅಗ್ನಿಶಾಮಕ ಸಿಬಂದಿ ಹಾಗೂ ಸ್ಥಳೀಯರ ಹರಸಾಹಸದಿಂದ ಬೆಂಕಿ ನಂದಿಸಲಾಯಿತು.

Latest Indian news

Popular Stories