ರಾಧಿಕಾ ಕುಮಾರಸ್ವಾಮಿಗೆ ಬಂತು ಸಿಸಿಬಿ ಬುಲಾವ್, ನಾಳೆಯೇ ವಿಚಾರಣೆ

ಬೆಂಗಳೂರು,ಜ.7(ಯುಎನ್‍ಐ):- ಯುವರಾಜ್ ಸ್ವಾಮಿ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೆÇಲೀಸರು, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಧಿಕಾ ಕುಮಾರಸ್ವಾಮಿಗೆ ಸಮನ್ಸ್ ನೀಡಿದ್ದಾರೆ.
ಶುಕ್ರವಾರ ಜನವರಿ 8 ರಂದು ಸಿಸಿಬಿ ಎದುರು ವಿಚಾರಣೆಗೆ ಹಾಜರಾಗಬೇಕು ಎಂದು ಸಮನ್ಸ್ ನೀಡಲಾಗಿದ್ದು. ಈ ಕುರಿತು ಸಿಸಿಬಿ ಜಂಟಿ ಪೆÇಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮಾಹಿತಿ ನೀಡಿದ್ದಾರೆ.
ಆರ್‍ಎಸ್‍ಎಸ್ ಮುಖಂಡ ಎಂದು ಹೇಳಿಕೊಂಡು, ವಿವಿಧ ನಿಗಮಗಳ ಅಧ್ಯಕ್ಷ ಸ್ಥಾನ ಕೊಡಿಸುತ್ತೇನೆ, ರಾಜ್ಯದ ರಾಜ್ಯಪಾಲರನ್ನಾಗಿ ಮಾಡುತ್ತೇನೆ ಎಂದೆಲ್ಲಾ ಹೇಳಿ ಹಲವರಿಂದ ಕೋಟ್ಯಂತರ ರೂಪಾಯಿ ಹಣ ವಸೂಲಿ ಮಾಡಿರುವ ಆರೋಪಿ ಯುವರಾಜ್ ಸ್ವಾಮಿಯನ್ನು ಬಂಧಿಸಲಾಗಿದೆ.
ಯುವರಾಜ್ ಸ್ವಾಮಿಯನ್ನು ವಿಚಾರಣೆಗೆ ಒಳಪಡಿಸಿದ ಬಳಿಕ ಆತನ ಖಾತೆಯಿಂದ ರಾಧಿಕಾ ಕುಮಾರಸ್ವಾಮಿ ಖಾತೆಗೆ ಲಕ್ಷಾಂತರ ಹಣ ಸಂದಾಯವಾಗಿರುವುದು ತಿಳಿದುಬಂದಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಧಿಕಾ ಕುಮಾರಸ್ವಾಮಿ ಸಹೋದರ ರವಿರಾಜ್ ಅವರ ವಿಚಾರಣೆ ನಡೆಸಿರುವ ಸಿಸಿಬಿ. ರಾಧಿಕಾ ಕುವಕುಮಾರÀಸ್ವಾಮಿ ಅವರಿಗೂ ಸಮನ್ಸ್ ನೀಡಿದೆ.
ನಾಟ್ಯರಾಣಿ ಶಾಂತಲೆ ಜೀವನಕ್ಕೆ ಸಂಬಂಧಿಸಿ ಪತ್ನಿಯ ಹೆಸರಲ್ಲಿರುವ ಪೆÇ್ರಡಕ್ಷನ್ ಹೌಸ್ ಮೂಲಕ ಸಿನಿಮಾ ಮಾಡಬೇಕು ಹೇಳಿದ್ದ ಯುವರಾಜ್ ಸ್ವಾಮಿ ತಮ್ಮ ಸ್ವಂತ ಖಾತೆಯಿಂದ ನನಗೆ 15 ಲಕ್ಷ ವರ್ಗಾವಣೆ ಮಾಡಿದ್ದರು. ಮತ್ತೊಬ್ಬರ ಖಾತೆಯಿಂದ 60 ಲಕ್ಷ ವರ್ಗಾವಣೆ ಮಾಡಿದ್ದರು’ ಎಂದು ರಾಧಿಕಾ ಕುಮಾರಸ್ವಾಮಿಯವರು ಬುಧವಾರದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.
‘ಜ್ಯೋತಿಷಿ ಆಗಿದ್ದ ಕಾರಣ ಅವರ ಪರಿಚಯ ಬಹಳ ವರ್ಷಗಳಿಂದಲೂ ಇದೆ. ಅವರದ್ದೇ ಒಂದು ಪೆÇ್ರಡಕ್ಷನ್ ಹೌಸ್ ಇದ್ದು, ಸಿನಿಮಾ ನಿರ್ಮಿಸಬೇಕು ಎಂದ ಕಾರಣಕ್ಕೆ ನಾನು ಹಣ ಪಡೆದಿದ್ದೇನೆ. ಅಗತ್ಯಬಿದ್ದಲ್ಲಿ ಅದನ್ನು ಹಿಂದಿರುಗಿಸಲು ಸಿದ್ಧ’ ಎಂದಿದ್ದರು.
ಇದೀಗ ಸಿಸಿಬಿ ನೋಟಿಸ್ ನೀಡಿರುವ ಪ್ರಕಾರ ರಾಧಿಕಾ ಕುಮಾರಸ್ವಾಮಿ ಶುಕ್ರವಾರ ವಿಚಾರಣೆಗೆ ಹಾಜರಾಗುತ್ತಾರಾ, ಅವರು ನೀಡುವ ಹೇಳಿಕೆಯಲ್ಲಿ ಏನಾದರೂ ಬದಲಾವಣೆ ಇರಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

Latest Indian news

Popular Stories