ಖ್ಯಾತ ನೃತ್ಯ ನಿರ್ದೇಶಕ ರೆಮೋ ಡಿಸೋಜಾಗೆ ಹೃದಯಾಘಾತ : ‘ಗೆಟ್ ವೆಲ್ ರೆಮೋ’ ಎಂದ ಬಿಗ್ ಬಿ

ಮುಂಬೈ, ಡಿ 14 (ಯುಎನ್‍ಐ):- ಬಾಲಿವುಡ್ ನ ಖ್ಯಾತ ನಿರ್ದೇಶಕ ರೆಮೋ ಡಿ ಸೋಜಾಗೆ ಹೃದಯಾಘಾತವಾಗಿದ್ದು, ಶೀಘ್ರವೇ ಗುಣಮುಖರಾಗುವಂತೆ ಬಿಗ್ ಬಿ ಅಮಿತಾಭ್ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಹಾರೈಸಿದ್ದಾರೆ.
ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೆಮೋ ಡಿ ಸೋಜಾ ಬೇಗ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಥ್ರೋಬ್ಯಾಕ್ ವಿಡಿಯೋ ಕ್ಲಿಪ್ ಅನ್ನು ಅಮಿತಾಭ್ ಶೇರ್ ಮಾಡಿ, ‘ಶೀಘ್ರವೇ ಗಣಮುಖರಾಗಿ ರೆಮೋ’ ಎಂದು ಟ್ವೀಟ್ ಮಾಡಿದ್ದಾರೆ.

Latest Indian news

Popular Stories