ರಣದೀಪ್ ಹೂಡಾ ಅಭಿನಯದ ‘ಸ್ವಾತಂತ್ರ್ಯ ವೀರ್ ಸಾವರ್ಕರ್’ – ವಿನಾಯಕ್ ದಾಮೋದರ್ ಸಾವರ್ಕರ್ ಅಕಾ ವೀರ್ ಸಾವರ್ಕರ್ ಅವರ ಜೀವನಚರಿತ್ರೆ – ಮಾರ್ಚ್ 22 ರಂದು ಬೆಳ್ಳಿ ತೆರೆಗೆ ಬಂದಿದೆ. ಹಿಂದಿ ಮತ್ತು ಮರಾಠಿ – ಎರಡು ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಿದೆ. ಆದರೆ ಪ್ರೇಕ್ಷಕರು ಮಾತ್ರ ಸಿನಿಮಾಕ್ಕೆ ನಿರಾಸಕ್ತಿ ತೋರಿದ ಪರಿಣಾಮ ಮೊದಲ ದಿನ ಕೇವಲ 17 ಲಕ್ಷ ಸಂಗ್ರಹವಾಗಿದೆ. ಇದರೊಂದಿಗೆ ಸಿನಿಮಾ ಫ್ಲಾಫ್ ಆಗಿದೆ.
ಸಿನಿಮಾದ ಟ್ರೇಲರ್ ಮಾರ್ಚ್ 4 ರಂದು ಬಿಡುಗಡೆಯಾಗಿತ್ತು. ಹೂಡಾ ಚಲಚಿತ್ರಕ್ಕಾಗಿ ಬೃಹತ್ ದೇಹ ರೂಪಾಂತರ ಮಾಡಿದ್ದರು. ಅವರು ಚಿತ್ರದ ಸೆಟ್‌ಗಳಿಂದ ತೆರೆಮರೆಯ ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾರು. ಚಿತ್ರದ ಯಶಸ್ಸಿನ ನಿರೀಕ್ಷೆಯಲ್ಲಿದ್ದ ಹೂಡಾಗೆ ಭಾರೀ ನಿರಾಸೆಯಾಗಿದೆ.
ಬಾಕ್ಸ್ ಆಫೀಸ್ ಟ್ರ್ಯಾಕರ್ Sacnilk.com ಪ್ರಕಾರ, ಚಲನಚಿತ್ರವು ತನ್ನ ಮೊದಲ ದಿನದಲ್ಲಿ ಸುಮಾರು 17 ಲಕ್ಷ ಭಾರತೀಯ ನಿವ್ವಳವನ್ನು ಎಲ್ಲಾ ಭಾಷೆಗಳು ಸೇರಿ ಗಳಿಸಿದೆ.