ಉತ್ತರ ಪ್ರದೇಶ: ಅಜಂಗಢದಲ್ಲಿ ದಲಿತ ಸರ್ಕಾರಿ ಅಧಿಕಾರಿ ಮತ್ತು ಅವರ ಪತ್ನಿಯ ಹತ್ಯೆ

ಉತ್ತರ ಪ್ರದೇಶ: ಅಜಂಗಢ ಜಿಲ್ಲೆಯ ತಿಥೌಪುರ್ ಗ್ರಾಮದಲ್ಲಿ ಭಾನುವಾರ ತಡರಾತ್ರಿ ದಲಿತ ದಂಪತಿಯನ್ನು ಅವರ ನಿರ್ಮಾಣ ಹಂತದ ಮನೆಯಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಸಂತ್ರಸ್ಥರಾದ 55 ವರ್ಷದ ಪತಿ ರಾಮ್ ನಾಗಿನಾ, ಮೌದಲ್ಲಿ ಪೋಸ್ಟ್ ಮಾಡಲಾದ ಲೆಖ್ಪಾಲ್ (ಕಂದಾಯ ದಾಖಲೆ ಕೀಪರ್) ಮತ್ತು ಅವರ 52 ವರ್ಷದ ಪತ್ನಿ ಮಾನಸಾ ದೇವಿ ಅವರು ಅಜಮ್‌ಗಢ್‌ನ ತರ್ವಾನ್ ಪೊಲೀಸ್ ಠಾಣಾ ವ್ಯಾಪ್ತಿಯ ತಿಥೌಪುರ್‌ನಲ್ಲಿರುವ ತಮ್ಮ ಹಳ್ಳಿಯ ಮನೆಯಲ್ಲಿ ಮಲಗಿದ್ದಾಗ ಹತ್ಯೆಗೈಲಾಗಿದೆ.ಸಾಂದರ್ಭಿಕ ಪುರಾವೆಗಳ ಪ್ರಕಾರ ದಾಳಿಕೋರರು ಕೆಲವು ಹರಿತವಾದ ಆಯುಧಗಳಿಂದ ದಂಪತಿಯ ಕುತ್ತಿಗೆಯನ್ನು ಸೀಳಿದ್ದಾರೆ.

ಅಜಂಗಢದ ಪೊಲೀಸ್ ಅಧೀಕ್ಷಕ ಅನುರಾಗ್ ಆರ್ಯ ಮಾತನಾಡಿ, “ಭಾನುವಾರ ತಡರಾತ್ರಿ ಕೆಲವು ಅಪರಿಚಿತ ದುಷ್ಕರ್ಮಿಗಳು ದಂಪತಿಯ ಮನೆಗೆ ನುಗ್ಗಿ ಚೂಪಾದ ಆಯುಧಗಳಿಂದ ಕತ್ತು ಕೊಯ್ದು ಕೊಂದು ಸ್ಥಳದಿಂದ ನಿರ್ಗಮಿಸಿದ್ದಾರೆ. ಸಂತ್ರಸ್ತರ ನೆರೆಹೊರೆಯವರಿಂದ ಮಾಹಿತಿ ಪಡೆದ ಪೊಲೀಸರಿಗೆ ಸೋಮವಾರ ಬೆಳಿಗ್ಗೆ ಕೊಲೆಯ ಬಗ್ಗೆ ತಿಳಿಯಿತು. ಪೊಲೀಸ್ ತಂಡವು ಶ್ವಾನದಳ ಮತ್ತು ಬೆರಳಚ್ಚು ತಜ್ಞರೊಂದಿಗೆ ಅಪರಾಧ ಸ್ಥಳಕ್ಕೆ ಧಾವಿಸಿ ಶವಗಳನ್ನು ವಶಕ್ಕೆ ತೆಗೆದುಕೊಂಡು ಶವಪರೀಕ್ಷೆಗೆ ಕಳುಹಿಸಿದೆ.

ದಲಿತ-ದಂಪತಿ ಹತ್ಯೆಯ ಸುದ್ದಿ ಕಾಳ್ಗಿಚ್ಚಿನಂತೆ ಹರಡಿತು ಮತ್ತು ನೂರಾರು ಗ್ರಾಮಸ್ಥರು ಅಲ್ಲಿ ಜಮಾಯಿಸಿದರು.ಅಕ್ಕಪಕ್ಕದ ಪೊಲೀಸ್ ಠಾಣೆಗಳ ಪೊಲೀಸರು ಕೂಡ ಸ್ಥಳಕ್ಕೆ ಆಗಮಿಸಿದ್ದರು.

ಮೃತ ಸರ್ಕಾರಿ ಅಧಿಕಾರಿ ನಾಗಿನಾ ಅವರು ಮೂವರು ಸಹೋದರರಲ್ಲಿ ಹಿರಿಯರಾಗಿದ್ದರು ಮತ್ತು ಮೂವರು ಹೆಣ್ಣು ಮಕ್ಕಳನ್ನು ಹೊಂದಿದ್ದರು. ಅವರಲ್ಲಿ ಒಬ್ಬರು ವಿವಾಹಿತರು.

ಪ್ರಯಾಗ್‌ರಾಜ್‌ನ ಫಾಫಮೌ ಪೊಲೀಸ್ ಠಾಣೆ ವ್ಯಾಪ್ತಿಯ ಗೋಹ್ರಿ ಎಂಬಲ್ಲಿ ದಲಿತ ಕುಟುಂಬದ ನಾಲ್ವರು ಸದಸ್ಯರನ್ನು ಅವರ ಹಳ್ಳಿಯ ಮನೆಯಲ್ಲಿ ಬುಧವಾರ ಹತ್ಯೆ ಮಾಡಿದ ಕೆಲವೇ ದಿನಗಳಲ್ಲಿ ಅಜಂಗಢದಲ್ಲಿ ದಂಪತಿಗಳ ಹತ್ಯೆ ನಡೆದಿದೆ. ಬಲಿಯಾದವರಲ್ಲಿ ಒಬ್ಬ ಪುರುಷ (50 ಮತ್ತು ಅವನ ಹೆಂಡತಿ (45) ವರ್ಷ, ಅವರ ಮಗಳು (16) ಮತ್ತು ಮಗ (10) ಸೇರಿದ್ದಾರೆ.ಹತ್ಯೆಯಾದ ಕುಟುಂಬದ ಸಂಬಂಧಿಕರ ಪ್ರಕಾರ ಕೊಲೆಯ ಹಿಂದೆ ಜಮೀನು ವಿವಾದದ ಕುರಿತು ಉಲ್ಲೇಖಿಸಿದ್ದು, ನೆರಹೊರೆಯ ಮೇಲ್ಜಾತಿಯವರ ಮೇಲೆ ಆರೋಪ ಮಾಡಿದ್ದರು.

Latest Indian news

Popular Stories