ಐಪಿಎಲ್ 2022: ಶಿಖರ್ ಧವನ್ ಭರ್ಜರಿ ಬ್ಯಾಟಿಂಗ್, ಚೆನ್ನೈ ವಿರುದ್ಧ ಪಂಜಾಬ್ ಕಿಂಗ್ಸ್ ಗೆಲುವು

ಮುಂಬೈ: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಐಪಿಎಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ, ಶಿಖರ್ ಧವನ್ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 11 ರನ್ ಗಳಿಂದ ಗೆಲುವು ಸಾಧಿಸಿದೆ. ಇದರೊಂದಿಗೆ ಐಪಿಎಲ್ ನಲ್ಲಿ ನಾಲ್ಕನೇ ಗೆಲವು ದಾಖಲಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ, ಶಿಖರ್ ಧವನ್ ಅವರ(88 ರನ್, 59 ಎಸೆತ, 9 ಬೌಂಡರಿ, 2 ಸಿಕ್ಸರ್) ಭರ್ಜರಿ ಬ್ಯಾಟಿಂಗ್ ನ ಫಲವಾಗಿ 4 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿತು.

ಗೆಲುವಿಗೆ 188 ರನ್ ಗಳ ಗುರಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ, ಅಂಬಟಿ ರಾಯುಡು (78 ರನ್, 39 ಎಸೆತ, 7 ಬೌಂಡರಿ, 6 ಸಿಕ್ಸರ್) ಸ್ಪೋಟಕ ಬ್ಯಾಟಿಂಗ್ ನಡೆಸಿ ತಂಡಕ್ಕೆ ಗೆಲುವು ತರುವ ಪ್ರಯತ್ನ ಮಾಡಿದ್ದರು. ಆದರೆ, ಆರ್ಶ್ ದೀಪ್ ತಾವು ಎಸೆದ 17ನೇ ಓವರ್ ನಲ್ಲಿ 7 ರನ್ ಹಾಗೂ 19ನೇ ಓವರ್ ನಲ್ಲಿ ಕೇವಲ 8 ರನ್ ನೀಡುವ ಮೂಲಕ ಚೆನ್ನೈ ತಂಡದ ಗೆಲುವಿನ ಹೋರಾಟವನ್ನು ನಿಯಂತ್ರಿಸಿದರು. ಇದರಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ 6 ವಿಕೆಟ್ ಗೆ 176 ರನ್ ಗಳಿಸಲಷ್ಟೇ ಶಕ್ತವಾಯಿತು.

ಪಂಜಾಬ್‌ ಕಿಂಗ್ಸ್‌ ಪರ ಭರ್ಜರಿ ಬೌಲಿಂಗ್‌ ದಾಳಿ ಸಂಘಟಿಸಿದ ವೇಗಿ ಕಗಿಸೊ ರಬಾಡ, 4 ಓವರ್‌ಗಳಲ್ಲಿ 23 ರನ್‌ ಮಾತ್ರವೇ ಕೊಟ್ಟು 2 ವಿಕೆಟ್‌ ಕಿತ್ತರು. 5 ವರ್ಷಗಳ ಬಳಿಕ ಐಪಿಎಲ್‌ ಅಖಾಡಕ್ಕಿಳಿದ ಆಲ್‌ರೌಂಡರ್‌ ರಿಷಿ ಧವನ್‌ 39ಕ್ಕೆ 2 ವಿಕೆಟ್‌ ಪಡೆದು ಗಮನ ಸೆಳೆದರು.

Latest Indian news

Popular Stories