ಕಾಪು: ಗುಜರಿ ಅಂಗಡಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟ – ಇಬ್ಬರ ಸಜೀವ ದಹನ

ಕಾಪು: ಮಲ್ಲಾರಿನ ಸಲಫಿ ಮಸೀದಿ ಸಮೀಪವಿರುವ ಗುಜರಿ ಅಂಗಡಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟವಾಗಿ ಇಬ್ಬರು ಸಜೀವ ದಹನಗೊಂಡಿರುವ ಘಟನೆ ವರದಿಯಾಗಿದೆ.

ಅಂಗಡಿಯ ಪಾಲುದಾರ ರಜಬ್ ಮತ್ತು ಮತ್ತೋರ್ವರು ಘಟನೆಯಲ್ಲಿ ಅಸುನೀಗಿದ್ದಾರೆ. ಈ ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗುಜರಿಗೆ ಬಂದ ಗ್ಯಾಸ್ ಸಿಲಿಂಡರ್ ಸ್ಪೋಟವಾಗಿ ಘಟನೆ ನಡೆದಿದೆ.

ಅಂಗಡಿಯ ಅಂಗಡಿಯ ಸಾಮಾಗ್ರಿಗಳು ಸುಟ್ಟು ಸಂಪೂರ್ಣ ನಾಶವಾಗಿದೆ. ಅಗ್ನಿ ಶಾಮಕ ದಳ ಅಗ್ನಿ ನಂದಿಸಲು ಪ್ರಯತ್ನಿಸುತ್ತಿದೆ.

IMG 20220321 WA0016 Featured Story, Udupi

Latest Indian news

Popular Stories