ಕೇರಳಕ್ಕೆ ಎಂಟ್ರಿ ಕೊಟ್ಟ ಮಾನ್ಸೂನ್; ಜೂನ್ 2 ಕ್ಕೆ ರಾಜ್ಯದಲ್ಲಿ ಮಾನ್ಸೂನ್ ಆರಂಭ

ಬೆಂಗಳೂರು: ಜೂನ್ 2 ರಂದು ಕರ್ನಾಟಕದ ದಕ್ಷಿಣ ಒಳನಾಡಿನ ಮತ್ತು ಕರಾವಳಿ ಪ್ರದೇಶಗಳಿಗೆ ಮುಂಗಾರು ಪ್ರವೇಶಿಸುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಸಾಮಾನ್ಯ ವೇಳಾಪಟ್ಟಿಗಿಂತ ಮೂರು ದಿನ ಮುಂಚಿತವಾಗಿ ಮೇ 29 ರಂದು ಮಾನ್ಸೂನ್ ಕೇರಳವನ್ನು ಪ್ರವೇಶಿಸಿತು. ಸಾಮಾನ್ಯವಾಗಿ ಮಾನ್ಸೂನ್ ಕೇರಳ ಪ್ರವೇಶಿಸಿದ ಮೂರರಿಂದ ನಾಲ್ಕು ದಿನಗಳ ನಂತರ ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರದ ವಿಜ್ಞಾನಿ ಎ ಪ್ರಸಾದ್ ಹೇಳಿದ್ದಾರೆ.

ಮೇ 29 ರಂದು ಕೇರಳದಲ್ಲಿ ಮುಂಗಾರು ಮಳೆಯಾಗಲಿದ್ದು, ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ, ಬೆಂಗಳೂರು ನಗರದ ದಕ್ಷಿಣ ಒಳಭಾಗಗಳು, ಗ್ರಾಮಾಂತರ, ರಾಮನಗರ, ಚಾಮರಾಜನಗರ ಮತ್ತು ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಮತ್ತು ಕೊಡಗಿನಲ್ಲಿ ಜೂನ್ 2 ಅಥವಾ ಜೂನ್ 3 ರ ರಾತ್ರಿ ಮಳೆಯಾಗುವ ಸಾಧ್ಯತೆಯಿದೆ.

Latest Indian news

Popular Stories