ನಿಯಮ ಬಾಹಿರವಾಗಿ ಮುಷ್ಕರದ ಆರೋಪ: ಟೋಯೊಟಾ ಸಂಸ್ಥೆಯ 45 ಉದ್ಯೋಗಿಗಳು ವಜಾ

ರಾಮನಗರ: ಬಿಡದಿ‌ ಕೈಗಾರಿಕಾ ಪ್ರದೇಶದಲ್ಲಿರುವ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್ ಕಂಪನಿಯು ತನ್ನ 45 ಉದ್ಯೋಗಿಗಳನ್ನು ಸೇವೆಯಿಂದ ವಜಾ ಮಾಡಿದೆ.

ಕಾರ್ಮಿಕರ ಮೇಲೆ ಅಧಿಕಾರಿಗಳು ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಟಿಕೆಎಂ ನೌಕರರ ಸಂಘದ ನೇತೃತ್ವದಲ್ಲಿ ಕೆಲವು‌ ತಿಂಗಳ ಹಿಂದೆ ‌ಸಾವಿರಾರು‌ ಕಾರ್ಮಿಕರು ಮುಷ್ಕರ ನಡೆಸಿದ್ದರು. ಇದರಿಂದಾಗಿ ಎರಡೆರಡು ಬಾರಿ ಕಂಪನಿ‌ ಲಾಕೌಟ್ ಘೋಷಿಸಿತ್ತು. ಕಡೆಗೆ ಸರ್ಕಾರದ ಮಧ್ಯಸ್ಥಿಕೆಯಲ್ಲಿ ಸಂಧಾನ ಸಭೆ ನಡೆದು‌ ಉತ್ಪಾದನೆ ಪುನರಾರಂಭಗೊಂಡಿತ್ತು.

ನಿಯಮಬಾಹಿರವಾಗಿ ಮುಷ್ಕರ ನಡೆಸಿದ ಆರೋಪದ‌ ಮೇಲೆ ಟಿಕೆಎಂ ತನ್ನ 66 ನೌಕರರನ್ನು ಸೇವೆಯಿಂದ ಅಮಾನತು ಮಾಡಿ, ಅವರ ವಿರುದ್ಧ ತನಿಖೆಗೆ ಆದೇಶಿಸಿತ್ತು. ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ‌ಕಂಪನಿ‌ ‌ನಿಯಮಗಳ ಪ್ರಕಾರ ಈ ಕಾರ್ಮಿಕರನ್ನು ಸೇವೆಯಿಂದ ವಜಾ‌ ಮಾಡಿರುವುದಾಗಿ ಟಿಕೆಎಂ‌ ಪ್ರಕಟಣೆಯಲ್ಲಿ ತಿಳಿಸಿದೆ.

Latest Indian news

Popular Stories