ಮಲ್ಪೆ: ಅಬ್ಬರದ ಅಲೆಗೆ ಸಮುದ್ರಕ್ಕೆ ಬಿದ್ದ ಕುಂದಾಪುರ ಮೂಲದ ಮೀನುಗಾರ – ಮೃತ್ಯು

ಮಲ್ಪೆ: ಅಬ್ಬರದ ಅಲೆಗೆ ಸಮುದ್ರಕ್ಕೆ ಬಿದ್ದ ಮೀನುಗಾರರೊಬ್ಬರು ಮೃತಪಟ್ಟಿದ್ದಾರೆ.

ಮೃತರನ್ನು ಕುಂದಾಪುರದ ದೇವಲ್ಕುಂದ ಗ್ರಾಮದ ರಾಘವೇಂದ್ರ(45) ಎಂದು ಗುರುತಿಸಲಾಗಿದೆ.

ಮಲ್ಪೆ ಬಂದರಿನಲ್ಲಿ ಮೀನುಗಾರಿಕೆ ಬೋಟಿನಲ್ಲಿ ಕೆಲಸ ಮಾಡಿಕೊಂಡಿದ್ದು  ಎಪ್ರಿಲ್ 7 ರಂದು ರಾತ್ರಿ 09:00 ಗಂಟೆಗೆ ಸಂತೋಷ. ಬಸವ. ನಾಗರಾಜ ಮತ್ತು ಬಸವಣ್ಣ ರವರ ಮೀನುಗಾರಿಕೆಗೆ ಹೊರಟು ಸುಮಾರು 10 ಮಾರು ದೂರ ಅರಬ್ಬಿ ಸಮುದ್ರದಲ್ಲಿ ಸಮಯ ಸುಮಾರು ರಾತ್ರಿ 10:30 ಗಂಟೆಗೆ ಮೀನುಗಾರಿಕೆ ಬಲೆ ಬಿಡುತ್ತಿರುವಾಗ ಸಮುದ್ರದ ಅಬ್ಬರದ ಅಲೆಗೆ ಬೋಟು ಅಲುಗಾಡಿ ರಾಘವೇಂದ್ರ ಸಮುದ್ರದ ನೀರಿಗೆ ಬಿದ್ದಿದ್ದು ಅವರನ್ನು ಇತರ ಮೀನುಗಾರರು ಮೇಲಕ್ಕೆ ಎತ್ತಿ ಉಪಚರಿಸಿ ಮಲ್ಪೆ ಬಂದರಿಗೆ ಬಂದು ಸಮಯ ಸುಮಾರು 12:00 ಗಂಟೆಗೆ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಈಗಾಗಲೇ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. 

ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 33/2024 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

Latest Indian news

Popular Stories