ನೆದರ್ಲೆಂಡ್ಸ್‌ ಸರಣಿ: ದ.ಆಫ್ರಿಕಾಗೆ ಕೇಶವ್ ಮಹಾರಾಜ್‌ ನಾಯಕ

ಕ್ರೀಡಾ ಸುದ್ದಿ: ಎಡಗೈ ಸ್ಪಿನ್ನರ್‌ ಕೇಶವ್‌ ಮಹಾರಾಜ್‌ ನೆದರ್ಲೆಂಡ್ಸ್‌ ಎದುರಿನ ಏಕದಿನ ಕ್ರಿಕೆಟ್‌ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮುನ್ನಡೆಸಲಿದ್ದಾರೆ.

ಐಸಿಸಿ ವಿಶ್ವಕಪ್‌ ಸೂಪರ್‌ ಸೀರೀಸ್‌ ಅಂಗವಾಗಿ ನಡೆಯಲಿರುವ 3 ಪಂದ್ಯಗಳ ಸರಣಿ ನ.26ರಂದು ಆರಂಭವಾಗಲಿದೆ.16 ಮಂದಿಯ ತಂಡವನ್ನು ಕ್ರಿಕೆಟ್‌ ದ.ಆಫ್ರಿಕಾ ಪ್ರಕಟಿಸಿದ್ದು, ಟಿ20 ವಿಶ್ವಕಪ್‌ನಲ್ಲಿ ತಂಡವನ್ನು ಮುನ್ನಡೆಸಿದ್ದ ಬವುಮ, ಮಾಕ್ರìಮ್‌, ಡಿ ಕಾಕ್‌, ನೋರ್ಜೆ, ರಬಾಡ ಒಳಗೊಂಡಂತೆ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ.

ಆಲ್‌ರೌಂಡರ್‌ ವೇಯ್ನ ಪಾರ್ನೆಲ್‌ ಅವರನ್ನು 2017ರ ಬಳಿಕ ಮೊದಲ ಬಾರಿ ರಾಷ್ಟ್ರೀಯ ತಂಡಕ್ಕೆ ವಾಪಸ್‌ ಕರೆಸಿಕೊಳ್ಳಲಾಗಿದೆ. ಜತೆಗೆ ಜುಬೇರ್‌ ಹಮ್ಜ ಮತ್ತು ರಿಯಾನ್‌ ರಿಕೆಲ್ಟನ್‌ ತಂಡಕ್ಕೆ ಆಯ್ಕೆಯಗಿರುವ ಹೊಸಬರು. ಹಮ್ಜ ಈ ಹಿಂದೆ ಟೆಸ್ಟ್‌ ತಂಡದಲ್ಲಿದ್ದರು.

Latest Indian news

Popular Stories