ಪ್ರಥಮ ಏಕದಿನ ಪಂದ್ಯ: ಆರು ವಿಕೆಟ್ ಗಳಿಂದ ವೆಸ್ಟ್ ಇಂಡೀಸ್ ಮಣಿಸಿದ ಭಾರತ

ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಭಾರತ- ವೆಸ್ಟ್ ಇಂಡೀಸ್ ನಡುವಣ ಪ್ರಥಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ 6 ವಿಕೆಟ್ ಗಳಿಂದ ಅಂತರದಿಂದ ವೆಸ್ಟ್ ಇಂಡೀಸ್ ಸೋಲಿಸಿದ್ದು, ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಕಾಯ್ಡುಕೊಂಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ 43. 5 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 176 ರನ್ ಕಲೆಹಾಕಿತು. ಭಾರತದ ಪರ ಯುಜುವೇಂದ್ರ ಚಾಹೆಲ್ ನಾಲ್ಕು, ವಾಷಿಂಗ್ಟನ್ ಸುಂದರ್ 3, ಪ್ರಸಿದ್ ಕೃಷ್ಣ 2, ಮೊಹಮ್ಮದ್ ಸಿರಾಜ್ 1 ವಿಕೆಟ್ ಪಡೆದುಕೊಂಡಿದರು.

ವೆಸ್ಟ್ ಇಂಡೀಸ್ ನೀಡಿದ 176 ರನ್ ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 28 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 178 ರನ್ ಗಳಿಸುವ ಮೂಲಕ ಆರು ವಿಕೆಟ್ ಗಳ ಅಂತರದಿಂದ ಗೆಲುವು ದಾಖಲಿಸಿತು. ಟೀಂ ಇಂಡಿಯಾ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ನಾಯಕ ರೋಹಿತ್ ಶರ್ಮಾ 10 ಬೌಂಡರಿ, 1 ಸಿಕ್ಸ್ ನೊಂದಿಗೆ ಆಕರ್ಷಕ 60 ರನ್ ಗಳಿಸಿದರು. ಇಶಾನ್ ಕಿಶಾನ್ 28, ವಿರಾಟ್ ಕೊಹ್ಲಿ, 8, ರಿಷಭ್ ಪಂತ್, 11, ಸೂರ್ಯ ಕುಮಾರ್ ಯಾದವ್ 34, ದೀಪಕ್ ಹೂಡಾ 26 ರನ್ ಗಳಿಸಿದರು.

ಟೀಂ ಇಂಡಿಯಾ ಪರ ನಾಲ್ಕು ವಿಕೆಟ್ ಪಡೆದು ಪಂದ್ಯ ಗೆಲ್ಲಲು ಕಾರಣರಾದ ಯುಜುವೇಂದ್ರ ಚಾಹೆಲ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು

Latest Indian news

Popular Stories