ಬೆಳ್ತಂಗಡಿ: ಕೃಷಿ ಭೂಮಿಗೆ ಆನೆ ಲಗ್ಗೆ – ಅಡಿಕೆ ಮರಗಳು ನಾಶ

ಬೆಳ್ತಂಗಡಿ, ಮೇ 19: ಚಾರ್ಮಾಡಿ ಸಮೀಪದ ಹೊಸಮಠದ ಕೃಷಿ ಜಮೀನಿಗೆ ನುಗ್ಗಿದ ಕಾಡಾನೆಗಳ ಹಿಂಡು ಮೇ 18 ಗುರುವಾರದಂದು ಅಡಿಕೆ ಮರಗಳನ್ನು ನಾಶಪಡಿಸಿವೆ.

ಚಾರ್ಮಾಡಿ-ಕನಪಾಡಿ ಮೀಸಲು ಅರಣ್ಯದಿಂದ ಮೃತ್ಯುಂಜಯ ನದಿ ಮೂಲಕ ಆಗಮಿಸಿದ ಹಿಂಡು ಹೊಸಮಠದ ಚಂದ್ರನ್ ಅವರ ಜಮೀನಿನಲ್ಲಿದ್ದ 114 ಅಡಕೆ ಮರಗಳು, ಸಿಂಧು ರವಿ ಅವರ ಜಮೀನಿನ 36 ಮರಗಳು ಮತ್ತು ಪುರುಷೋತ್ತಮ ಅವರ ಜಮೀನಿನ 33 ಮರಗಳನ್ನು ನೆಲಸಮಗೊಳಿಸಿದೆ.

ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು, ತೋಟದ ಮಾಲೀಕರಿಗೆ ಪರಿಹಾರ ನೀಡುವಂತೆ ಮನವಿ ಮಾಡಿದರು.

ಕಡಿರುದ್ಯಾವರ ಗ್ರಾಮದ ಸಿರಿಬೈಲು ಎಂಬಲ್ಲಿ ಕಿರಣ ಹೆಬ್ಬಾರ್ ಎಂಬುವವರ ಕೃಷಿ ಜಮೀನಿಗೆ ಬುಧವಾರ ತಡರಾತ್ರಿ ಒಂಟಿ ಆನೆಯೊಂದು ನುಗ್ಗಿ 15ಕ್ಕೂ ಹೆಚ್ಚು ಬಾಳೆ ಗಿಡಗಳನ್ನು ನಾಶಪಡಿಸಿದೆ. ಎರಡು ದಿನಗಳ ಹಿಂದೆ ಮತ್ತೊಂದು ಆನೆ ರೈತನ ಜಮೀನಿಗೆ ನುಗ್ಗಿದ್ದರೂ ಹೆಚ್ಚಿನ ಹಾನಿಯಾಗಿಲ್ಲ. ಮೊನ್ನೆ ಬುಧವಾರ ಸಂಜೆ ಚಾರ್ಮಾಡಿ ಘಾಟಿಯ ರಸ್ತೆಯಲ್ಲಿ ಒಂಟಿ ಆನೆಯೊಂದು ನಿಂತಿದ್ದು ಟ್ರಾಫಿಕ್ ಜಾಮ್ ಉಂಟಾಗಿತ್ತು.

Latest Indian news

Popular Stories