ಬೊಲೆರೋ– ಟ್ರಕ್‌ ಭೀಕರ ಅಪಘಾತ: ಒಂದೇ ಕುಟುಂಬದ 10 ಮಂದಿ ಮೃತ್ಯು

ಬೊಲೆರೋ ವಾಹನ – ಟ್ರಕ್‌ ನಡುವಿನ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ 10 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ದುರಂತ ಘಟನೆ ಛತ್ತೀಸ್‌ಗಢದ ಧಮ್ತಾರಿ ಜಿಲ್ಲೆಯಲ್ಲಿ ಬುಧವಾರ ತಡರಾತ್ರಿ (ಮೇ 3 ರಂದು) ನಡೆದಿದೆ.

ಬೊಲೆರೋ ವಾಹನದಲ್ಲಿ ಕುಟುಂಬ ಸೋರಂನಿಂದ ಮರ್ಕಟೋಲಾಗೆ ಹೋಗುತ್ತಿದ್ದಾಗ ಮುಂದೆ ಬರುತ್ತಿದ್ದ ಟ್ರಕ್‌ ಗೆ ಢಿಕ್ಕಿ ಹೊಡೆದ ಪರಿಣಾಮ ಈ ಭೀಕರ ಅಪಘಾತ ಸಂಭವಿಸಿದೆ.

ಜಗತ್ರಾ ಬಳಿಯ ಕಂಕೇರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ಸಂಭವಿಸಿದ್ದು, ಒಂದು ಮಗು ಗಂಭೀರ ಗಾಯಗೊಂಡು, ಇತರರೂ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ರಾಯ್‌ಪುರಕ್ಕೆ ರವಾನಿಸಲಾಗಿದ್ದು, ಟ್ರಕ್ ಚಾಲಕನಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ವರದಿ ತಿಳಿಸಿದೆ.

ಛತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಘಟನೆಗೆ ಸಂತಾಪ ಸೂಚಿಸಿ,ಗಾಯಗೊಂಡವರು ಶೀಘ್ರ ಗುಣಮುಖವಾಗಲಿ ಎಂದು ಹಾರೈಸಿದ್ದಾರೆ.

Latest Indian news

Popular Stories