ಮಳೆ ಭೀತಿಯಲ್ಲಿ ಶ್ರೀಲಂಕ vs ಭಾರತ ಟಿ20 ಪಂದ್ಯ !

ಧರ್ಮಶಾಲಾ: ಶ್ರೀಲಂಕಾ ವಿರುದ್ಧವೂ ಟಿ20 ಪ್ರಭುತ್ವ ಮುಂದುವರಿಸಿರುವ ಭಾರತವೀಗ ನಯನಮನೋಹರ ಧರ್ಮಶಾಲಾ ಅಂಗಳದಲ್ಲಿ ಸರಣಿ ವಶಪಡಿಸಿಕೊಳ್ಳಲು ಹೊರಟಿದೆ. ಶನಿವಾರ ಮತ್ತು ರವಿ ವಾರ ಇಲ್ಲಿ ಕೊನೆಯ ಎರಡೂ ಪಂದ್ಯಗಳು ಏರ್ಪಡಲಿವೆ. ಆದರೆ ಮಳೆ ಸಹಕರಿಸಿದರೆ ಮಾತ್ರ ಟೀಮ್‌ ಇಂಡಿಯಾಕ್ಕೆ ಸರಣಿ ಎಂಬುದು ಸದ್ಯದ ಸ್ಥಿತಿ.

ಹಿಮಾಚಲ ಪ್ರದೇಶದ ಧರ್ಮ ಶಾಲಾದಲ್ಲಿ ಕಳೆದ ಕೆಲವು ದಿನಗಳಿಂದ ದಿನವೂ ಸಂಜೆ ಮಳೆಯಾಗುತ್ತಿದೆ. ಶನಿವಾರವೂ ಮಳೆಯ ಮುನ್ಸೂಚನೆ ಇದೆ. ಮಳೆಯಿಂದಾಗಿಯೇ ದಕ್ಷಿಣ ಆಫ್ರಿಕಾ ಎದುರಿನ 2019ರ ಟಿ20 ಪಂದ್ಯ ಹಾಗೂ 2020ರ ಏಕದಿನ ಪಂದ್ಯಗಳೆರಡೂ ಒಂದೂ ಎಸೆತ ಕಾಣದೆ ಕೊಚ್ಚಿಹೋಗಿದ್ದನ್ನು ನೆನಪಿಸಿ ಕೊಳ್ಳಬಹುದು. ಭಾರತ- ಶ್ರೀಲಂಕಾ ಪಂದ್ಯಗಳಿಗೂ ಇದೇ ಸ್ಥಿತಿ ಎದುರಾದರೆ ಅಚ್ಚರಿಪಡಬೇಕಾಗಿಲ್ಲ.

ಟಿ20 ಸ್ಪೆಷಲಿಸ್ಟ್‌ ಎಂದೇ ಗುರು ತಿಸಲ್ಪಟ್ಟಿದ್ದ ಅಪಾಯಕಾರಿ ವೆಸ್ಟ್‌ ಇಂಡೀಸಿಗೆ ವೈಟ್‌ವಾಶ್‌ ಮಾಡಿದ ಹಿಗ್ಗಿನಲ್ಲಿದ್ದ ಭಾರತಕ್ಕೆ ಶ್ರೀಲಂಕಾ ವನ್ನು ಮಣಿಸುವುದು ದೊಡ್ಡ ಸವಾ ಲಾಗಿರಲಿಲ್ಲ. ಏಕೆಂದರೆ, ಲಂಕನ್ನರ ಈ ಪಡೆ ವಿಂಡೀಸಿಗಿಂತಲೂ ದುರ್ಬಲ ವಾಗಿತ್ತು. ಆಸ್ಟ್ರೇಲಿಯದ ಕೈಯಲ್ಲಿ 4-1 ಏಟು ತಿಂದು ಬಂದಿತ್ತು. ಗುರುವಾರದ ಲಕ್ನೋ ಪಂದ್ಯದಲ್ಲಿ ಲಂಕನ್ನರ ದೌರ್ಬಲ್ಯ ಮತ್ತೆ ಸಾಬೀತಾಯಿತು. ರೋಹಿತ್‌ ಪಡೆಯ 62 ರನ್ನುಗಳ ಮೇಲುಗೈ ಟಿ20 ಮಟ್ಟಿಗೆ ಬೃಹತ್‌ ಗೆಲುವೇ ಆಗಿದೆ.

ಭಾರತ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನಲ್ಲಿ ಭರವಸೆಯ ಪ್ರದ ರ್ಶನ ನೀಡಿತ್ತು. ಆದರೆ ಫೀಲ್ಡಿಂಗ್‌ ಮಾತ್ರ ಶ್ರೀಲಂಕಾದಷ್ಟೇ ಕಳಪೆ ಯಾಗಿತ್ತು. ಅನೇಕ ಕ್ಯಾಚ್‌ಗಳು ನೆಲಕಚ್ಚಿದ್ದವು. ತಂಡದ ಯುವ ಕ್ರಿಕೆಟಿಗರು ಕ್ಷೇತ್ರರಕ್ಷಣೆಯನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕಾದ ಸಮಯವೀಗ ಸನ್ನಿಹಿತವಾಗಿದೆ.

Latest Indian news

Popular Stories