ಲುಲುಮಾಲ್’ನಲ್ಲಿ ಪ್ರಾರ್ಥನೆ ವಿವಾದ: ಇಂತಹ ಉಪದ್ರವವನ್ನು ಸೃಷ್ಟಿಸಲು ಪ್ರಯತ್ನಿಸುವ ಕಿಡಿಗೇಡಿಗಳ ವಿರುದ್ಧ ಕಟ್ಟುನಿಟ್ಟಾಗಿ ವ್ಯವಹರಿಸಬೇಕು – ಯೋಗಿ ಆದಿತ್ಯನಾಥ್

ಲಕ್ನೋ:ಲಕ್ನೋದ ಲುಲು ಮಾಲ್‌ನಲ್ಲಿ ಕೆಲವರು ಪ್ರಾರ್ಥನೆ ಸಲ್ಲಿಸಿದ ವಿವಾದದ ಕುರಿತು ಮಾತನಾಡಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, “ಅನಗತ್ಯ ಟೀಕೆಗಳು ಮತ್ತು ಜನರ ಓಡಾಟಕ್ಕೆ ಅಡ್ಡಿಪಡಿಸುವ ಪ್ರದರ್ಶನಗಳನ್ನು” ವಿರೋಧಿಸಿದ್ದಾರೆ.

ಅಬುಧಾಬಿ ಮೂಲದ ಭಾರತೀಯ ಮೂಲದ ಬಿಲಿಯನೇರ್‌ನ ಯುಸೂಫ್ ಅಲಿಯವರ ಲುಲು ಗ್ರೂಪ್ ನಡೆಸುತ್ತಿರುವ ಮಾಲ್ ಅನ್ನು ಜುಲೈ 10 ರಂದು ಉದ್ಘಾಟಿಸಿದ್ದ ಸಿಎಂ ಆದಿತ್ಯನಾಥ್, “ಲಕ್ನೋ ಆಡಳಿತವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಇಂತಹ ಉಪದ್ರವವನ್ನು ಸೃಷ್ಟಿಸಲು ಪ್ರಯತ್ನಿಸುವ ಕಿಡಿಗೇಡಿಗಳ ವಿರುದ್ಧ ಕಟ್ಟುನಿಟ್ಟಾಗಿ ವ್ಯವಹರಿಸಬೇಕು” ಎಂದು ಹೇಳಿದರು.

ರಾಜ್ಯ ರಾಜಧಾನಿ ಲಕ್ನೋದಲ್ಲಿ ಜುಲೈ 12 ರಂದು ಮಾಲ್‌ನಲ್ಲಿ ನಮಾಜ್ ಮಾಡುತ್ತಿದ್ದ ಎಂಟು ಮಂದಿಯಲ್ಲಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ನಮಾಝಿಗಳ ವೀಡಿಯೋ ವೈರಲ್ ಆದ ನಂತರ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಆರೋಪದ ಮೇಲೆ ಪ್ರಕರಣವನ್ನು ದಾಖಲಿಸಲಾಗಿದೆ. ನಂತರ ಅಲ್ಲಿ ಹಿಂದು ಬಲಪಂಥೀಯ ಸಂಘಟನೆಗಳ ಕಾರ್ಯಕರ್ತರು ಹನುಮಾ ಚಾಲಿಸ ಪಠಿಸಲು ಅವಕಾಶ ಕೇಳಿದ್ದರು. ಅದನ್ನು ನಿರಾಕರಿಸಲಾಗಿತ್ತು.

ನಂತರ, ಜುಲೈ 15 ರಂದು ಹನುಮಾನ್ ಚಾಲಿಸ ಪಠಿಸಲು ನಡೆಸಲು ಯತ್ನಿಸಿದ ಮೂವರನ್ನು ಬಂಧಿಸಲಾಯಿತು. ಮತ್ತೊಬ್ಬ ಮುಸ್ಲಿಂ ವ್ಯಕ್ತಿಯನ್ನು ನಮಾಜ್ ಮಾಡಲು ಪ್ರಯತ್ನಿಸಿದ್ದಕ್ಕಾಗಿ ಬಂಧಿಸಲಾಯಿತು. ಮರುದಿನ, 10 ಕ್ಕೂ ಹೆಚ್ಚು ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ. ಜೊತೆಗೆ ಇಬ್ಬರನ್ನು ಬಂಧಿಸಲಾಯಿತು.

ಮಾಲ್‌ನಲ್ಲಿ ಯಾವುದೇ ಧಾರ್ಮಿಕ ಪ್ರಾರ್ಥನೆಗೆ ಅನುಮತಿ ನೀಡುವುದಿಲ್ಲ ಎಂದು ಆಡಳಿತ ಮಂಡಳಿ ನಂತರ ಬೋರ್ಡ್ ಹಾಕಿದೆ.

ಕೆಲವು ಸಂಸ್ಥೆಯವರು ಮಾಲ್ ಮಾಲೀಕರ ಪಕ್ಷಪಾತ ನಿಲುವು ಹೊಂದಿದ್ದಾರೆ ಎಂದು ಆರೋಪಿಸಿದ್ದರು. ಆಡಳಿತವು ತನ್ನೊಂದಿಗೆ ಉದ್ಯೋಗದಲ್ಲಿರುವವರ ಡೇಟಾವನ್ನು ಒದಗಿಸಲು ನಿರಾಕರಿಸಿದೆ.

ಜನರಲ್ ಮ್ಯಾನೇಜರ್ ಸಮೀರ್ ವರ್ಮಾ ಮಾತನಾಡಿ, “ಲುಲು ಮಾಲ್ ಎಲ್ಲಾ ಧರ್ಮಗಳನ್ನು ಗೌರವಿಸುತ್ತದೆ ಮತ್ತು ಇಲ್ಲಿ ಯಾವುದೇ ರೀತಿಯ ಪೂಜೆಗೆ ಅವಕಾಶವಿಲ್ಲ, ಈ ನಿಟ್ಟಿನಲ್ಲಿ ನಾವು ನಮ್ಮ ಸಿಬ್ಬಂದಿಗೆ ಇಂತಹ ಘಟನೆಗಳ ಮೇಲೆ ನಿಗಾ ಇಡಲು ಕಟ್ಟುನಿಟ್ಟಿನ ತರಬೇತಿ ನೀಡುತ್ತೇವೆ” ಎಂದು ಹೇಳಿದರು.

Latest Indian news

Popular Stories