ವಿಜಯಪುರ: ಪತ್ರಕರ್ತರ ಪ್ರಶ್ನೆಗೆ ಉತ್ತರಿಸಲಾಗದೆ ತಡಬಡಾಯಿಸಿದ ಬಿಜೆಪಿ ನಾಯಕರು

ವರದಿ: ಸಮಿಯುಲ್ಲಾ ಉಸ್ತಾದ

ವಿಜಯಪುರ: ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಬಿಜೆಪಿ ನಾಯಕರು ತಡಬಡಾಯಿಸಿದ ಘಟನೆ ವಿಜಯಪುರದಲ್ಲಿಂದು ನಡೆದಿದೆ.
ವಿಜಯಪುರದಲ್ಲಿ ಬಿಜೆಪಿ ವಕ್ತಾರ ಸುರೇಶಗೌಡ ಬಿರಾದಾರ ಸುದ್ದಿಗೋಷ್ಠಿ ನಡೆಸಿದ ಸಂದರ್ಭದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ, ಮತಾಂತರ ನಿಷೇಧ ಕಾಯ್ದೆಗಳಿಗೆ ಸಂಬಂಧಿಸಿದ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ತಡಬಡಾಯಿಸಿದರು.


ಇಲ್ಲಿಯವರೆಗೆ ಗೋಹತ್ಯೆ ನಿಷೇಧ ಹಾಗೂ ಮತಾಂತರ ನಿಷೇಧ ಕಾಯ್ದೆಯಡಿ ಎಷ್ಟು ಪ್ರಕರಣಗಳು ದಾಖಲಾಗಿವೆ, ದಾಖಲಾದ ಪ್ರಕರಣಗಳ ಮೇಲೆ ಕೈಗೊಂಡ ಕ್ರಮಗಳ ಕುರಿತ ಪತ್ರಕರ್ತರ ಪ್ರಶ್ನೆಗಳಿಗೆ ಮಾಹಿತಿಯ ಕೊರತೆಯಿಂದ ಉತ್ತರಿಸಲಾಗದೇ ಮುಜುಗರಕ್ಕೀಡಾಗಿದ್ದಲ್ಲದೇ, ತಮ್ಮ ಅಸಹಾಯಕತೆಯನ್ನು ತೋರಿಸಿದರು.


ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ಹಿನ್ನಲೆ ಬಿಜೆಪಿಯಿಂದ ಆಯೋಜಿಸಿರುವ ನರೇಂದ್ರ ಮೋದಿ ಅವರ ಜೀವನ ಚರಿತ್ರೆ ತಿಳಿಸುವ ಕಾರ್ಯಕ್ರಮಕ್ಕೆ ಸಂಬAಧಿಸಿದAತೆ ಪತ್ರಕರ್ತರಿಂದ ತೂರಿಬಂದ ಪ್ರಶ್ನೆಗಳಿಗೂ ಸಹ ಉತ್ತರಿಸಲಾಗದೆ ಕಕ್ಕಾಬಿಕ್ಕಿಯಾಗಿ ಮೋದಿ ಅವರು 15ಲಕ್ಷ ಪ್ರತಿಯೊಬ್ಬರ ಖಾತೆಗೆ ಬರುತ್ತದೆ ಎಂದು ಹೇಳಿಲ್ಲಾ, ಸ್ವಿಸ್ ಬ್ಯಾಂಕ್‌ನಲ್ಲಿ ಅಷ್ಟು ಹಣ ಇದೆ ಎಂದು ಹೇಳಿದ್ದಾರೆ ಎಂದು ಸಮಜಾಯಿಷಿ ನೀಡಲು ಮುಂದಾದರು. ಇದಕ್ಕೆ ಪ್ರತಿಯಾಗಿ ಪತ್ರಕರ್ತರು, ಪ್ರಧಾನಿಗಳು ಪ್ರತಿಯೊಬ್ಬರ ಖಾತೆಗೆ 15ಲಕ್ಷ ರೂ ಜಮೆ ಮಾಡುವ ಕಾರ್ಯದ ಪ್ರಗತಿ ಏನಾಗಿದೆ, ಸ್ವಿಸ್ ಬ್ಯಾಂಕ್‌ನಲ್ಲಿ ಕಪ್ಪು ಹಣ ತರುವ ಕಾರ್ಯದ ಮಾಹಿತಿ ಮಾಹಿತಿ ಒದಗಿಸುವಂತೆ ಕೇಳಿದ ಪ್ರಶ್ನೆಗೆ ಅಸಮಂಜಸವಾದ ಉತ್ತರ ನೀಡುತ್ತ, ಸ್ವೀಸ್ ಬ್ಯಾಂಕ್‌ನಲ್ಲಿರುವ ಕಪ್ಪು ಹಣ ತರುವ ಕಾರ್ಯ, ಹೋರಾಟಗಳು ಜಾರಿಯಲ್ಲಿವೆ ಎಂದು ಉತ್ತರ ನೀಡಿದರು.

Latest Indian news

Popular Stories