ಸಾರ್ವಜನಿಕ ಕಲ್ಯಾಣಕ್ಕಾಗಿ ಖಾಸಗಿ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಬಹುದೇ? ಸುಪ್ರೀಮ್ ಕೋರ್ಟ್ ಹೇಳಿದ್ದೇನು?

ಸಾರ್ವಜನಿಕ ಕಲ್ಯಾಣಕ್ಕಾಗಿ ಖಾಸಗಿ ಆಸ್ತಿ(Private Property)ಯನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳಬಹುದೇ? ಎನ್ನುವ ವಿಚಾರ ಕುರಿತ ಸಾಂವಿಧಾನಿಕ ಸಮಸ್ಯೆಯನ್ನು ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್​ ನೇತೃತ್ವದ 9 ನ್ಯಾಯಮೂರ್ತಿಗಳ ಪೀಠ ಆಲಿಸಿತು. ಈ ಹಿಂದೆ, ಮುಂಬೈನ ಆಸ್ತಿ ಮಾಲೀಕರ ಸಂಘ (ಪಿಒಎ) ಸೇರಿದಂತೆ ವಿವಿಧ ಪಕ್ಷಗಳ ವಕೀಲರು ಸಂವಿಧಾನದ 39(ಬಿ) ಮತ್ತು 31 ಸಿ ಅಡಿಯಲ್ಲಿ ಸಾಂವಿಧಾನಿಕ ಯೋಜನೆಗಳ ನೆಪದಲ್ಲಿ ಖಾಸಗಿ ಆಸ್ತಿಗಳನ್ನು ರಾಜ್ಯ ಅಧಿಕಾರಿಗಳು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಬಲವಾಗಿ ವಾದಿಸಿದ್ದವು.

ಆರ್ಟಿಕಲ್ 39B ಹೇಳುವಂತೆ ಸರ್ಕಾರವು ಎಲ್ಲರ ಒಳಿತಿಗಾಗಿ ಸಮುದಾಯ ಸಂಪನ್ಮೂಲಗಳನ್ನು ನ್ಯಾಯಯುತವಾಗಿ ಹಂಚಿಕೊಳ್ಳಲು ನೀತಿಗಳನ್ನು ರೂಪಿಸುವ ಹಕ್ಕನ್ನು ಹೊಂದಿದೆ. ಇದು ಖಾಸಗಿ ಒಡೆತನದ ಸಂಪನ್ಮೂಲಗಳನ್ನು ಸಹ ಒಳಗೊಂಡಿದೆ ಎಂದು ಸುಪ್ರೀಂಕೋರ್ಟ್​ ಹೇಳಿದೆ. ಖಾಸಗಿ ಆಸ್ತಿ ಎಂದರೆ ಕೇವಲ ಸಾರ್ವಜನಿಕರ ಆಸ್ತಿಯಲ್ಲ ಅದರಲ್ಲಿ ಗಣಿಗಾರಿಕೆ, ಅರಣ್ಯ ಪ್ರದೇಶ ಎಲ್ಲವೂ ಸೇರಿದೆ. ಒಮದೊಮ್ಮೆ ರಾಜ್ಯ ಸರ್ಕಾರಕ್ಕೆ ಖಾಸಗಿ ಆಸ್ತಿಗಳ ಮೇಲೆ ಹಕ್ಕಿಲ್ಲ ಎಂದು ಹೇಳಿದರೆ ಪ್ರಮಾದವೇ ನಡೆಯುತ್ತದೆ ಎಂದಿದ್ದಾರೆ.

2020ರಲ್ಲಿ ಇದೇ ರೀತಿಯ ವಿಚಾರವಾಗಿ ಸುಪ್ರೀಂಕೋರ್ಟ್​ ಖಾಸಗಿ ಆಸ್ತಿ ಹೊಂದುವುದು ನಾಗರಿಕನ ಹಕ್ಕು, ಖಾಸಗಿ ಭೂಮಿಯನ್ನು ಕಬಳಿಸುವುದು ಮತ್ತು ಅದನ್ನು ತನ್ನದು ಎಂದು ರಾಜ್ಯ ಸರ್ಕಾರಗಳು ಹೇಳಿಕೊಳ್ಳುವಂತಿಲ್ಲ ಎಂದಿತ್ತು. ಖಾಸಗಿ ಆಸ್ತಿಗೆ ಸಂಬಂಧಿಸಿದಂತೆ 1977 ರ ರಂಗನಾಥ ರೆಡ್ಡಿ ಪ್ರಕರಣದಲ್ಲಿ ನ್ಯಾಯಮೂರ್ತಿ ಕೃಷ್ಣಯ್ಯರ್ ಅವರ ತೀರ್ಪಿನ ವ್ಯಾಖ್ಯಾನವನ್ನು ಸುಪ್ರೀಂ ಕೋರ್ಟ್ ಆಲಿಸುತ್ತಿದೆ ಎಂದು ಸುಪ್ರೀಂ ಕೋರ್ಟ್ ವಕೀಲ ಅಶ್ವಿನಿ ದುಬೆ ಹೇಳಿದ್ದಾರೆ.

ದೇಶದಲ್ಲಿ ಒಂದೆಡೆ ಪಿತ್ರಾರ್ಜಿತ ಆಸ್ತಿ ತೆರಿಗೆಯನ್ನು ಜಾರಿಗೆ ತರುವ ಬಗ್ಗೆ ಕಾಂಗ್ರೆಸ್​ ಹೇಳಿಕೆ ನೀಡುತ್ತಿದೆ. ಇದರ ನಡುವೆ ಸಾರ್ವಜನಿಕ ಕಲ್ಯಾಣಕ್ಕಾಗಿ ಖಾಸಗಿ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಬಹುದೇ ಎನ್ನುವ ಬಗ್ಗೆ ಸುಪ್ರೀಂ ಮಹತ್ವದ ಹೇಳಿಕೆ ನೀಡಿದೆ.

ಆರ್ಟಿಕಲ್ 39(B) ಅಡಿಯಲ್ಲಿ ಸರ್ಕಾರದ ನೀತಿಯು ಖಾಸಗಿ ಅರಣ್ಯಗಳಿಗೆ ಅನ್ವಯಿಸುವುದಿಲ್ಲ. ಹೀಗಾಗಿ ಈ ವಿಚಾರದಿಂದ ದೂರವಿರಿ ಎಂದು ಹೇಳುವುದು ಬಹಳ ಅಪಾಯಕಾರಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸಾಮಾಜಿಕ ಬದಲಾವಣೆಯ ಭಾವವನ್ನು ತರುವುದು ಸಂವಿಧಾನದ ಉದ್ದೇಶ ಎಂದು ಸುಪ್ರೀಂ ಕೋರ್ಟ್ ಇಂದು ಹೇಳಿದೆ.

ವ್ಯಕ್ತಿಯ ಖಾಸಗಿ ಆಸ್ತಿಯನ್ನು ಸಮುದಾಯದ ವಸ್ತು, ಸಂಪನ್ಮೂಲವೆಂದು ಪರಿಗಣಿಸಲಾಗುವುದಿಲ್ಲ ಎಂದು ಹೇಳುವುದು ಅಪಾಯಕಾರಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸಂವಿಧಾನದ 39ಬಿ ಮತ್ತು 31ಸಿಯ ಸಾಂವಿಧಾನಿಕ ಯೋಜನೆಗಳ ಅಡಿಯಲ್ಲಿ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುವುದಿಲ್ಲ ಎಂಬುದು ಅವರ ವಾದವಾಗಿದೆ.

ಸಂವಿಧಾನ ಪೀಠದಲ್ಲಿ ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್, ಬಿವಿ ನಾಗರತ್ನ, ಸುಧಾಂಶು ಧುಲಿಯಾ, ಜೆಬಿ ಪರ್ದಿವಾಲಾ, ಮನೋಜ್ ಮಿಶ್ರಾ, ರಾಜೇಶ್ ಬಿಂದಾಲ್, ಸತೀಶ್ಚಂದ್ರ ಶರ್ಮಾ ಮತ್ತು ಆಗಸ್ಟಿನ್ ಜಾರ್ಜ್ ಮಸಿಹ್ ಕೂಡ ಇದ್ದರು.

Latest Indian news

Popular Stories