ಭರ್ಜರಿ ರೋಡ್ ಶೋ; ಸ್ಕೂಟರ್ ಚಲಾಯಿಸಿದ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್

ಕಾರವಾರ: ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರು ನಗರದಲ್ಲಿ ಶಾಸಕ ಸತೀಶ್ ಸೈಲ್ ಅವರಿಂದಿಗೆ ಭರ್ಜರಿ ರೋಡ್ ಶೋ ನಡೆಸಿದರು.

ನಗರದ ಮಿತ್ರ ಸಮಾಜ ಮೈದಾನದಿಂದ ಆರಂಭವಾದ ಬೈಕ್ ಯಾತ್ರೆಯಲ್ಲಿ ಸಾವಿರಾರು ಯುವಕರು ಪಾಲ್ಗೊಂಡರು. ಯುವಕರೊಂದಿಗೆ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಹಾಗೂ ಶಾಸಕ ಸತೀಶ್ ಸೈಲ್ ಕೂಡ ಬೈಕ್‌ನಲ್ಲಿ ಸಾಗಿ ಗಮನ ಸೆಳೆದರು.

ಮಿತ್ರ ಸಮಾಜ- ಕಾಜುಬಾಗ- ಕೋಡಿಬಾಗ ರಸ್ತೆ ಮೂಲಕ ಟೋಲ್‌ನಾಕಾ, ಸುಂಕೇರಿ ರಸ್ತೆ ಮೂಲಕ ಪುನಃ ಮಿತ್ರ ಸಮಾಜದಲ್ಲಿ ಬೈಕ್ ಯಾತ್ರೆ ಸಮಾಪ್ತಿಗೊಳ್ಳಲಿದೆ‌.

Latest Indian news

Popular Stories