ಸೀರೆ ವಿವಾದ: ದೆಹಲಿಯ ರೆಸ್ಟೋರೆಂಟ್ ಸ್ಪಷ್ಟೀಕರಣದಲ್ಲಿ ಹೇಳಿದ್ದೇನು?

ನವದೆಹಲಿ: ಅಖಿಲಾ ರೆಸ್ಟೋರೆಂಟ್ ನಲ್ಲಿ ಸೀರೆ ಉಟ್ಟುಕೊಂಡು ಬಂದಿದ್ದ ಮಹಿಳೆಯನ್ನು ಒಳಗೆ ಸೇರಿಸದೆ ಅವಮಾನ ಮಾಡಲಾಗಿದೆಯೆಂಬ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿತ್ತು. ಇದೀಗ ಇದರ ಕುರಿತು ರೆಸ್ಟೋರೆಂಟ್ ಸ್ಪಷ್ಟೀಕರಣ ನೀಡಿದೆ.

ಕೇವಲ ಹತ್ತು ಸೆಕೆಂಡ್ ವೀಡಿಯೋ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಜನರಿಗೆ ತಪ್ಪು ಮಾಹಿತಿ ನೀಡಲಾಗಿದೆ. ವಾಸ್ತವವಾಗಿ ನಮ್ಮ ರೆಸ್ಟೋರೆಂಟ್ ನಲ್ಲಿ ಎಲ್ಲ ತರಹದ ಡ್ರೆಸ್ ಕೋಡ್’ಗೆ ಅನುಮತಿಯಿದೆ.

ರೆಸ್ಟೋರೆಂಟ್ ನಲ್ಲಿ ನಡೆದ ಘಟನೆಯನ್ನು ತಿರುಚಲಾಗಿದೆ. ನಮ್ಮ ರೆಸ್ಟೋರೆಂಟ್ ಬರುವ ಮಹಿಳೆಯರು ಸೀರೆ ಧರಿಸಿ ಬರುವ ಫೋಟೊ ಗಳನ್ನು ತೋರಿಸುತ್ತೇವೆಯೆಂದು ಹೇಳಿ, ಅಖಿಲಾ ರೆಸ್ಟೋರೆಂಟ್ ಸಿಸಿಟಿವಿ ಫುಟೇಜ್, ಚಿತ್ರಗಳನ್ನು ಬಿಡುಗಡೆ ಮಾಡಿದೆ.

ಅದರೊಂದಿಗೆ ಮಹಿಳೆ ಅನುಚಿತವಾಗಿ ವರ್ತಿಸಿ ರೆಸ್ಟೋರೆಂಟ್ ಸಿಬ್ಬಂದಿಗೆ ಹೊಡೆಯುವ ಸಿಸಿಟಿವಿ ವೀಡಿಯೋ ಕೂಡ ಬಿಡುಗಡೆಗೊಳಿಸಿದೆ.

ವಾಸ್ತವವಾಗಿ ಆಕೆ ರಿಸರ್ವ್ ಮಾಡಿರಲಿಲ್ಲ. ಆ ಕಾರಣಕ್ಕಾಗಿ ನಮ್ಮಲ್ಲಿ ಆ ಸಮಯಕ್ಕೆ ಟೇಬಲ್ ಇರಲಿಲ್ಲ. ಆಕೆಯನ್ನು ಸ್ವಲ್ಪ ಸಮಯ ಹೊರಗೆ ಕುಳಿತುಕೊಳ್ಳುವಂತೆ ಹೇಳಿದೆವು. ಅಂತರಿಕವಾಗಿ ನಾವು ಅವರನ್ನು ಎಲ್ಲಿ ಕುಳಿತುಕೊಳ್ಳಿಸುವುದೆಂದು ಚರ್ಚಿಸುತ್ತಿದ್ದೇವು. ಆ ಸಮಯದಲ್ಲಿ ಆಕೆ ಒಳಗೆ ಬಂದು ಗಲಾಟೆ ಮಾಡಿದ್ದಾರೆ. ನಂತರ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿರುವ ಆರೋಪ ಮಾಡಿದ್ದಾರೆ.

ಸೀರೆಯ ಕುರಿತು ಸಿಬ್ಬಂದಿಯೊಬ್ಬ ಹೇಳಿಕೆ ನೀಡಿದ್ದಾನೆ. ಆದರೆ ಅದಕ್ಕೂ ರೆಸ್ಟೋರೆಂಟ್’ಗೂ ಯಾವುದೇ ಸಂಬಂಧವಿಲ್ಲ. ನಮ್ಮಲ್ಲಿ ಆ ನಿಯಮವೂ ಇಲ್ಲವೆಂದು ರೆಸ್ಟೋರೆಂಟ್ ಮ್ಯಾನೇಜರ್ ಸ್ಪಷ್ಟ ಪಡಿಸಿದ್ದಾರೆ.

Latest Indian news

Popular Stories