ಸ್ಕಾಟ್ಲೆಂಡ್ ವಿರುದ್ಧ ಗೆದ್ದ ನಂತರ ಡ್ರಸ್ಸಿಂಗ್ ರೂಮ್’ಗೆ ತೆರಳಿ ಹುರಿದುಂಭಿಸಿದ ವಿರಾಟ್ ಕೊಹ್ಲಿ – ವ್ಯಾಪಕ ಪ್ರಶಂಸೆ

ದುಬೈ: ಟಿ-20 ವಿಶ್ವಕಪ್ ನಲ್ಲಿ ಕ್ರಿಕೆಟ್ ಶಿಶು ಸ್ಕಾಟ್ಲೆಂಡ್ ವಿರುದ್ಧ ಭಾರತ ಭರ್ಜರಿ ಗೆಲುವು ಸಾಧಿಸಿದ ನಂತರ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಸ್ಕಾಟ್ಲೆಂಡ್ ತಂಡದ ಡ್ರೆಸ್ಸಿಂಗ್ ರೂಮಿಗೆ ತೆರಳಿ ಹುರಿದುಂಭಿಸಿದರು. ಇದೀಗ ಅವರ ನಡೆಯನ್ನು ವ್ಯಾಪಕವಾಗಿ ಪ್ರಶಂಸಿಲಾಗುತ್ತಿದೆ.

ವಿರಾಟ್ ಕೊಹ್ಲಿಯವರು ಡ್ರಸ್ಸಿಂಗ್ ರೂಮಿಗೆ ಆಗಮಿಸಿ ಸ್ಕಾಟ್ಲೆಂಡ್ ತಂಡದ ಆಟಗಾರರನ್ನು ಹುರಿದುಂಭಿಸಿದ ಕಾರಣಕ್ಕೆ ಸ್ಕಾಟ್ಲೆಂಡ್ ಕ್ರಿಕೆಟ್ ಆಡಳಿತ ಮಂಡಳಿ ವಿರಾಟ್ ಕೊಹ್ಲಿಯವರನ್ನು ಶ್ಲಾಘಿಸಿದೆ.

ಸ್ಕಾಟ್ಲೆಂಡ್ ತಂಡ ಈಗಾಗಲೇ ವಿಶ್ವಕಪ್ ರೇಸ್ ನಿಂದ ಹೊರಬಿದ್ದಿದೆ. ಭಾರತದ ವಿರುಧ್ಧದ ಪಂದ್ಯದಲ್ಲಿ ಸ್ಕಾಟ್ಲೆಂಡ್ 87 ರನ್ ಗಳಿಸಿತ್ತು. ಭಾರತ ಈ ಪಂದ್ಯವನ್ನು ಸುಲಭವಾಗಿ ಗೆದ್ದಿತ್ತು.

Latest Indian news

Popular Stories