ಇಸ್ರೇಲ್ ದಾಳಿಯ ಬೆನ್ನಲ್ಲೇ ಹಮಾಸ್’ನಿಂದ ಕ್ಷಿಪಣಿ ದಾಳಿ – ಹಲವರಿಗೆ ಗಾಯ

ಜೆರುಸಲೇಂ: ಇಸ್ರೇಲ್‌ನ ಟೆಲ್‌ ಅವಿವ್‌ ನಗರದ ಮೇಲೆ ಬೃಹತ್‌ ಕ್ಷಿಪಣಿ ದಾಳಿ ಮಾಡಿರುವುದಾಗಿ ಹಮಾಸ್‌ ಬೆಂಬ ಲಿತ ಅಲ್‌ ಖಾಸಮ್‌ ಸಂಘಟನೆ ಹೇಳಿದೆ.

ನಗರದ ಮೇಲೆ ರಾಕೆಟ್‌ ದಾಳಿ ನಡೆದಿರುವ ಕುರಿತಾಗಿ ಸೈರನ್‌ ಕೇಳಿ ಬಂದಿದೆ ಎಂದು ಇಸ್ರೇಲ್‌ ಸೇನೆ ಒಪ್ಪಿ ಕೊಂಡಿದೆ. ಗಾಜಾ ಪಟ್ಟಿಯಿಂದ ಈ ರಾಕೆಟ್‌ ಗಳನ್ನು ಹಾರಿ ಸ ಲಾಗಿದ್ದು, 4 ತಿಂಗಳ ಬಳಿಕ ಟೆಲ್‌ ಅವಿವ್‌ ನಗರದಲ್ಲಿ ಸೈರನ್‌ ಶಬ್ದ ಕೇಳಿ ಬಂದಿದೆ. ಈ ಘಟನೆಯಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ. ಗಾಝಾದ ಮೇಲೆ ಇಸ್ರೇಲ್ ದಾಳಿ ಮುಂದುವರಿಯುತ್ತಿದ್ದಂತೆ ಹಲವು ತಿಂಗಳುಗಳ ನಂತರ ಹಮಾಸ್ ಕ್ಷಿಪಣಿ ದಾಳಿ ನಡೆಸಿದೆ.

ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಟೆಲ್ ಅವಿವ್ ಸೇರಿದಂತೆ ಮಧ್ಯ ಇಸ್ರೇಲ್‌ನ ಸುಮಾರು 30 ಪ್ರದೇಶಗಳಲ್ಲಿ ಸೈರನ್‌ಗಳು ಸದ್ದು ಮಾಡಿದೆ.

ಇರಾನ್‌ ಬೆಂಬಲಿತ ಹೆಜ್ಬುಲ್ಲಾ ಇಸ್ರೇಲ್‌ಗೆ ಎಚ್ಚರಿಕೆ ನೀಡಿದ್ದು, ನೀವು ನಮ್ಮಿಂದ ಅಚ್ಚರಿಯೊಂದನ್ನು ನಿರೀಕ್ಷಿಸಿ ಎಂದು ಹೇಳಿದೆ. ಹೀಗಾಗಿ ಇಸ್ರೇಲ್‌ ಮೇಲೆ ದಾಳಿ ನಡೆಸಲು ಹೆಜ್ಬುಲ್ಲಾ ಮಿಲಿಟೆಂಟ್ ಸಂಘಟನೆ ಸಿದ್ಧತೆ ಆರಂಭಿಸಿದೆ ಎಂದು ವರದಿಗಳು ತಿಳಿಸಿವೆ. ಹಮಾಸ್‌  ಮೇಲೆ ಇಸ್ರೇಲ್‌ ಕೈಗೊಂಡಿರುವ ದಾಳಿಯನ್ನು  ಸಂಘಟನೆ ಖಂಡಿಸಿತ್ತು. ಅಲ್ಲದೇ ಇರಾನ್‌ ಅಧ್ಯಕ್ಷ ರೈಸಿ ಸಾವಿನ ಹಿಂದೆ ಇಸ್ರೇಲ್‌ ಕೈವಾಡ ಇದೆ ಎಂಬ ವರದಿಗಳ ಬೆನ್ನಲ್ಲೇ ಮತ್ತೂಮ್ಮೆ ಎಚ್ಚರಿಕೆ ನೀಡಿದೆ.

ಗಾಜಾದ ಮೇಲೆ ಇಸ್ರೇಲ್‌ನ ಯುದ್ಧದಲ್ಲಿ ಕನಿಷ್ಠ 35,984 ಜನರು ಸಾವನ್ನಪ್ಪಿದ್ದಾರೆ ಎಂದು ಗಾಜಾದಲ್ಲಿನ ಪ್ಯಾಲೇಸ್ಟಿನಿಯನ್ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ

Latest Indian news

Popular Stories