ಮಂಗಳೂರು: ಉಕ್ರೇನ್-ರಷ್ಯಾ ಯುದ್ಧ ಬಿಕ್ಕಟ್ಟಿನಿಂ ದಾಗಿ ಸ್ವದೇಶಕ್ಕೆ ವಾಪಸಾಗಿರುವ ಭಾರತೀಯ ವಿದ್ಯಾರ್ಥಿಗಳು ಅತ್ತ ಉಕ್ರೇನ್‌ಗೆ ಮರಳಲು ಆಗದೆ ಇತ್ತ ಸ್ವದೇಶದಲ್ಲೇ ವಿದ್ಯಾಭ್ಯಾಸ ಮುಂದುವರಿಸಲು ಸಾಧ್ಯವಾಗದೆ ಪೇಚಿಗೆ ಸಿಲುಕಿದ್ದಾರೆ. ಇದರ ಜತೆಗೆ ಈಗ ಉಕ್ರೇನ್‌ನ ಕೆಲವು ವಿ.ವಿ.ಗಳ ಶುಲ್ಕದ ಹೊರೆ ವಿದ್ಯಾರ್ಥಿಗಳನ್ನು ಕಂಗಾಲಾಗಿಸಿದೆ.
ಬಹುತೇಕ ಎಲ್ಲ ವಿದ್ಯಾ ರ್ಥಿಗಳಿಗೂ ಆನ್‌ಲೈನ್‌ನಲ್ಲೇ ತರಗತಿಗಳು ನಡೆಯುತ್ತಿವೆ. ಪ್ರಾಕ್ಟಿಕಲ್ ತರಗತಿ ಇಲ್ಲದಿರುವ ಕಾರಣ ಕೆಲವು ವಿದ್ಯಾರ್ಥಿಗಳು ಗೊಂದಲಕ್ಕೊಳಗಾಗಿದ್ದಾರೆ.
ಇನ್ನು ಕೆಲವು ವಿದ್ಯಾರ್ಥಿಗಳಿಗೆ ಥಿಯರಿ ತರಗತಿ ಕೂಡ ಆನ್‌ಲೈನ್‌ನಲ್ಲಿ ಸಮರ್ಪಕವಾಗಿ ನಡೆಯುತ್ತಿಲ್ಲ. ಉಕ್ರೇನ್‌ನ ಕೆಲವು ಯುನಿವರ್ಸಿಟಿಗಳು ಶುಲ್ಕವನ್ನು ಪೂರ್ಣ ಪ್ರಮಾಣದಲ್ಲಿ ವಸೂಲಿ ಮಾಡಿಕೊಳ್ಳುತ್ತಿವೆ. ಪೂರ್ಣ ಮೊತ್ತ ಪಾವತಿಸದಿದ್ದರೆ ಯಾವುದೇ ಪ್ರಮಾಣಪತ್ರ ಅಥವಾ ಇತರ ದಾಖಲೆಗಳನ್ನು ನೀಡುವುದಿಲ್ಲ ಎಂದು ಬೆದರಿಸುತ್ತಿವೆ.
ವರ್ಷಕ್ಕೆ 4 ಲ.ರೂ. ಶುಲ್ಕವಿದೆ. ಉಕ್ರೇನ್‌ನಿಂದ ವಾಪಸಾದ ಅನಂತರ 2 ಲ.ರೂ. ಪಾವತಿಸಿದ್ದೇನೆ. ಶುಲ್ಕ ಪಾವತಿಸದಿದ್ದರೆ ಅವರು ಪ್ರಮಾಣಪತ್ರ ನೀಡುವುದಿಲ್ಲ. ಹಾಗಾಗಿ ಪಾವತಿಸಿದ್ದೇನೆ ಎಂದು ಓರ್ವ ವಿದ್ಯಾರ್ಥಿ ತಿಳಿಸಿದ್ದಾರೆ.
ಒಟ್ಟಿನಲ್ಲಿ ವಿದ್ಯಾರ್ಥಿಗಳ ಗೊಂದಲ ಮುಂದುವರಿದಿದ್ದು ಸೂಕ್ತ ನಿರ್ಧಾರ ಕ್ಕಾಗಿ ಸರಕಾರದ ಕಡೆ ಮುಖ ಮಾಡಿದ್ದಾರೆ.