502 ವಂಚನೆ ಪ್ರಕರಣಗಳ ಆರೋಪಿಗಳು ಅರೆಸ್ಟ್

ವಿಜಯಪುರ : ಹೊರ ದೇಶದ ಕಾಬೂಲ್ನಲ್ಲಿ ನಿಮ್ಮ ವಿರುದ್ಧ ದೂರು ದಾಖಲಾಗಿದೆ, ಇಷ್ಟು ಹಣ ಹಾಕಿದರೆ ನೀವು ಸೇಫ್, ನಿಮ್ಮ ದಾಖಲಾತಿಗಳನ್ನು ಕೂಡಲೇ ಸಲ್ಲಿಸಿ, ನಿಮ್ಮ ವಿದ್ಯಾರ್ಹತೆ ಅನುಗುಣವಾಗಿ ನಿಮಗೆ ನೌಕರಿ ಬಂದಿದೆ, ಕೂಡಲೇ ಡಿಫಾಸಿಟ್ ಅಮೌಂಟ್ ಹಣ ಹಾಕಿ ಎಂದು ದೇಶದಾದ್ಯಂತ ಆನಲೈನ್ ವಂಚನೆ ಜಾಲ ದೇಶದಾದ್ಯಂತ ನಿದ್ದೆಗೆಡಿಸಿದೆ.


ವಿಜಯಪುರದ ಖ್ಯಾತ ವೈದ್ಯರೊಬ್ಬರನ್ನು ವಂಚಿಸಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ವಿಜಯಪುರ ಜಿಲ್ಲೆಯ ಪೊಲೀಸರು ಈ ಪ್ರಕರಣ ಬೇಧಿಸುವಲ್ಲಿ ಮಾಡಿದ ತನಿಖೆ ಪರಿಣಾಮವಾಗಿ ದೇಶದಲ್ಲಿ ನಡೆದ ಹಲವಾರು ಪ್ರಕರಣಗಳು ಬೇಧಿತವಾಗಿವೆ. ವಿಜಯಪುರ ಪೊಲೀಸರು ಬಂಧಿಸಿರುವ ಆರೋಪಿಗಳೇ ದೇಶಾದ್ಯಂತ ಒಟ್ಟು 502 ಜನರಿಗೆ ವಂಚನೆ ಮಾಡಿದ ಬಗ್ಗೆ ತಿಳಿದು ಬಂದಿದದ್ದು, ಈ ಆರೋಪಿಗಳು ಅನಾಮಧೆಯರ ಹೆಸರಿನಲ್ಲಿ ವಿವಿಧ ಬ್ಯಾಂಕ್ಳಲ್ಲಿ ಸುಮಾರು 170 ಖಾತೆಗಳನ್ನು ತೆರೆದೆ ಜನರಿಗೆ ವಂಚನೆ ಮಾಡಿರುವ ಪ್ರಸಂಗ ಸಹ ಬೆಳಕಿಗೆ ಬಂದಿದೆ, ಆರೋಪಿತರು ಅನಾಮಧೆಯರ ಹೆಸರಿನಲ್ಲಿ ವಿವಿಧ ಕಂಪನಿಯ 120 ಸಿಮ್ ಗಳನ್ನು ಉಪಯೋಗ ಮಾಡಿದ ದೊಡ್ಡ ಜಾಲವೂ ಸಹ ತನಿಖೆ ವೇಳೆ ತಿಳಿದು ಬಂದಿದೆ.

ವೈದ್ಯರನ್ನು ವಂಚಿಸಿದವರು ಅಂದರ್:


ವಿಜಯಪುರದ ಖ್ಯಾತ ಹೃದಯರೋಗ ತಜ್ಞ ಡಾ.ಅನಿರುದ್ಧ ಉಮರ್ಜಿ ಅವರನ್ನು ವಂಚಿಸಿದ ಆರೋಪಿಗಳನ್ನು ವಿಜಯಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಹರ್ಯಾಣಾದ ಕುರುಕ್ಷೇತ್ರ ನಿವಾಸಿ ರಾಜೀವ್ ಸತ್ಪಾಲ್ ವಾಲಿಯಾ, ರಾಜಸ್ತಾನ ಉದಯಪುರ ಜಿಲ್ಲೆ ನಿವಾಸಿ ರಾಜಶೇಖರ ಶಂಕರಲಾಲ ಟೈಲರ್, ಕರಣ್ ತೇಜಪಾಲ್ ಯಾದವ್, ಸುರೇಂದ್ರಸಿಂಗ್ ನಾಕೋಡಾ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಕೃತ್ಯಕ್ಕೆ ಬಳಿಸಿದ ವಿವಿಧ ಕಂಪನಿಯ 09 ಮೊಬೈಲ್ಗಳು, 07 ಸಿಮ್ ಕಾರ್ಡಗಳು, 01 ಟ್ಯಾಬ್ ವಶಪಡಿಸಿಕೊಂಡು ಆಪಾದಿತರ ಬ್ಯಾಂಕ್ ಖಾತೆಗಳನ್ನು ಡೆಬಿಟ್ ಪ್ರೀಜ್ ಮಾಡಲಾಗಿದೆ. ಈ ಪ್ರಕರಣ ಹಾಗೂ ಇನ್ನೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 68,77,135/-ರೂ.ಗಳು ವಂಚನೆ ಆಗಿದ್ದು, ಈ ಪೈಕಿ ಈಗಾಗಲೇ 40 ಲಕ್ಷ ರೂ.ಗಳನ್ನು ಪಿರ್ಯಾಧಿದಾರರಿಗೆ ರಿಫಂಡ್ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಋಷಿಕೇಶ ಸೋನಾವನೆ ಮಾಹಿತಿ ನೀಡಿದ್ದಾರೆ.


ವೈದ್ಯರಾಗಿರುವ ಡಾ.ಅನೀರುದ್ಧ ಉಮರ್ಜಿ ಅವರಿಗೆ ಬಂಧಿತ ಆರೋಪಿಗಳು ಆನಲೈನ್ ಮೂಲಕ ಮೋಸ ಮಾಡುವ ಉದ್ದೇಶದಿಂದ ಅವರಿಗೆ ಫೆಡ್ಎಕ್ಸ್ ಕೋರಿಯರ್ ಮೂಲಕ ಕಾಬೂಲ್ಗೆ ನಿಷೇಧಿತ ವಸ್ತುಗಳಾದ ಅಂತಾರಾಷ್ಟ್ರೀಯ ಸಿಮ್ ಕಾರ್ಡ್, ಮಾದಕ ದ್ರವ್ಯ ಕಳುಹಿಸಿದ್ದು, ಈ ಬಗ್ಗೆ ಮುಂಬೈ ನಾರ್ಕೋಟಿಕ್ಸ್ನಲ್ಲಿ ದೂರು ದಾಖಲಾಗಿದೆ ಎಂದು ಹೆದರಿಸಿ ವೈದ್ಯರ ಎಫ್.ಡಿ. ಖಾತೆಯಲ್ಲಿದ್ದ 54 ಲಕ್ಷ ರೂ. ತಮ್ಮ ಪಂಜಾಬ ನ್ಯಾಶನಲ್ ಬ್ಯಾಂಕ್ ಖಾತೆಗೆ ಜಮಾ ಮಾಡಿಸಿಕೊಂಡು ಆನಲೈನ್ ಮೂಲಕ ಡಿಜಿಟಲ್
ಅರೆಸ್ಟ್ ಮಾದರಿಯಲ್ಲಿ ಮೋಸ ಮಾಡಿದ್ದರು. ಈ ಹಿನ್ನೆಲೆಯಲ್ಲಿ ವೈದ್ಯ ಡಾ.ಉಮರ್ಜಿ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.


ಅದೇ ತೆರನಾಗಿ ಮಖಣಾಪೂರ ತಾಂಡಾ ನವಾಸಿ ಬಬನ್ ನಾಮದೇವ ಚವ್ಹಾಣ ಸಹ ಬೇರೆ ರೀತಿಯಲ್ಲಿ ಮೋಸ ಹೋಗಿದ್ದರು. ಪಾರ್ಟ್ ಜಾಬ್ ಕೊಡಿಸುವುದಾಗಿ ಆರೋಪಿಗಳು ಭರವಸೆ ನೀಡಿ 14,77,135 ರೂ. ಪಡೆದುಕೊಂಡಿದ್ದರು. ಈ ಬಗ್ಗೆ ಅವರು ಸಹ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಎರಡು ಪ್ರಕರಣಗಳನ್ನು ಗಂಭೀರವಾಗಿ ನಡೆಸದ ತನಿಖೆ ಪರಿಣಾಮವಾಗಿ ದೊಡ್ಡ ಜಾಲವನ್ನೇ ಪೊಲೀಸರು ಮಟ್ಟ ಹಾಕಿದ್ದಾರೆ.


ಪೊಲೀಸ್ ಅಧಿಕಾರಿ ಸುನೀಲಕುಮಾರ ನಂದೇಶ್ವರ ನೇತೃತ್ವದ ತನಿಖಾ ತಂಡು ತಾಂತ್ರಿಕ ಸಾಕ್ಷಾಧಾರಗಳ ಮೂಲಕ ಮಾಹಿತಿ ಕಲೆ ಹಾಕಿ ಖಚಿತ ಮಾಹಿತಿ ಆಧರಿಸಿ ಹರಿಯಾಣ ಮತ್ತು ರಾಜ್ಯಸ್ಥಾನ ಆರೋಪಿಗಳನ್ನು ಬಂಧಿಸಿದೆ.

Latest Indian news

Popular Stories