Featured StoryNational

ಆಮ್ ಆದ್ಮಿ ಪಕ್ಷದ ಶಾಸಕರನ್ನು ಗುರಿಯಾಗಿಸಿಕೊಂಡು ಮಾನಹಾನಿಕಾರಕ ವರದಿ: ನವಭಾರತ, ಟೈಮ್ಸ್ ನೌ ಮೇಲೆ ದೆಹಲಿ ಹೈಕೋರ್ಟ್ ಕಟ್ಟುನಿಟ್ಟಿನ ನಿರ್ಬಂಧ

ಇತ್ತೀಚಿನ ವರದಿಗಳ ಪ್ರಕಾರ, ಟೈಮ್ಸ್ ನೌ ನತ್ತು ನವಭಾರತ್ ಮಾಧ್ಯಮಗಳಲ್ಲಿ ಆಮ್ ಆದ್ಮಿ ಪಕ್ಷ ಮತ್ತು ಅದರ ಶಾಸಕ ನರೇಶ್ ಬಲ್ಯಾನ್ ಅವರನ್ನು ಗುರಿಯಾಗಿಸಿಕೊಂಡು ಮಾನಹಾನಿಕರ ವರದಿ ಪ್ರಸಾರ ಮಾಡಲು ಚಾನೆಲ್ #OperationPaap ಎಂಬ ಹ್ಯಾಶ್‌ಟ್ಯಾಗ್ ಅನ್ನು ಬಳಸಿದೆ. ಶಾಸಕರಿಗೆ ದರೋಡೆಕೋರರೊಂದಿಗೆ ಸಂಪರ್ಕವಿದೆ ಎಂದು ಮಾನಹಾನಿಕಾರಕ ವರದಿ ಬಿತ್ತರಿಸಿರುವ ಕುರಿತು ಆಪ್ ನ್ಯಾಯಾಲಯದ ಮೊರೆ ಹೋಗಿತ್ತು.

ಇದೀಗ ನ್ಯಾಯಾಲಯ ಮಾನಹಾನಿಕಾರಕ ವರದಿಯ ಪ್ರಸಾರವನ್ನು ತಕ್ಷಣವೇ ನಿಲ್ಲಿಸುವಂತೆ ಟೈಮ್ಸ್ ನೌ ನವಭಾರತ್ ಮತ್ತು ಅದರ ಆಂಕರ್ ನವಿಕಾ ಕುಮಾರ್ ಅವರಿಗೆ ಆದೇಶಿಸಿದೆ. ನ್ಯಾಯಾಲಯದ ತೀರ್ಪಿನಲ್ಲಿ ತನ್ನ ಬೇಜವಾಬ್ದಾರಿ ವರದಿ ಮತ್ತು ಸಂಭಾವ್ಯ ಹಾನಿಕರ ಆರೋಪಗಳಿಗಾಗಿ ಚಾನೆಲ್ ನ್ನು ತರಾಟೆಗೆ ತೆಗೆದುಕೊಂಡಿದೆ.

ಸದ್ಯಕ್ಕೆ, ಟೈಮ್ಸ್ ನೌ ನವಭಾರತ್ ತನ್ನ ಕೃತ್ಯಗಳಿಗೆ ಯಾವುದೇ ಹೆಚ್ಚಿನ ಕಾನೂನು ಪರಿಣಾಮಗಳನ್ನು ಎದುರಿಸಬೇಕೇ ಎಂಬುದು ಅಸ್ಪಷ್ಟವಾಗಿದೆ. ಆದಾಗ್ಯೂ, ಈ ಘಟನೆಯು ಮತ್ತೊಮ್ಮೆ ಮಾಧ್ಯಮದ ನೈತಿಕತೆ ಮತ್ತು ಬೆಜವಾಬ್ದಾರಿಯ ವರ್ತನೆಯನ್ನು ಸಾಬೀತು ಮಾಡುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button