ಗೋರಖ್’ಪುರ ವಿಶ್ವವಿದ್ಯಾಲಯದಲ್ಲಿ ಧರಣಿ ನಿರತ ಎಬಿವಿಪಿ ಕಾರ್ಯಕರ್ತರಿಂದ ಕುಲಪತಿಯ ಮೇಲೆ ಹಲ್ಲೆ; ರಕ್ಷಿಸಲು ಬಂದ ಪೊಲೀಸರ ಮೇಲೂ ದರ್ಪ!

ದೀನ್ ದಯಾಳು ವಿಶ್ವವಿದ್ಯಾಲಯದಲ್ಲಿ ಧರಣಿ ನಿರತ ಎಬಿವಿಪಿ ಕಾರ್ಯಕರ್ತರ ದಾಂಧಲೆಯ ಕುರಿತು ವರದಿಯಾಗಿದೆ.

ಕೆಲವು ದಿನಗಳಿಂದ ಧರಣಿ ನಿರತ ಎಬಿವಿಪಿಯ ಕಾರ್ಯಕರ್ತರು ಶುಕ್ರವಾರ ಕುಲಪತಿಯ ಕಚೇರಿಯನ್ನು ಹಾನಿಗೊಳಿಸಿ ನಂತರ ಕುಲಪತಿಯನ್ನು ಅಟ್ಟಾಡಿಸಿಕೊಂಡು‌ಹೋಗಿ ಹೊಡದಿರುವ ಘಟನೆ ವರದಿಯಾಗಿದೆ.

ನಂತರ ರಕ್ಷಿಸಲು ಬಂದ ವೈದ್ಯರು ಮತ್ತು‌ ಪೊಲೀಸರ ಮೇಲೂ ಹಲ್ಲೆ ನಡೆಸಿದ ಹಿಂಸಾತ್ಮಕ ಗುಂಪು ಪೊಲೀಸರ ಬಲಪ್ರಯೋಗದ ನಂತರ ನಿಯಂತ್ರಣಕ್ಕೆ ತರಲಾಯಿತು. ಇದೀಗ ಹಲವರನ್ನು ವಶಕ್ಕೆ ಪಡೆಯಲಾಗಿದೆ.

Latest Indian news

Popular Stories