
INDIA ಮೋದಿ ಭಜನೆ ಮಾಡುತ್ತಿರುವ ಪ್ರಮೋದ್ ಮಧ್ವರಾಜ್ ರವರ ನಿದ್ದೆಗೆಡಿಸಿದೆ – ಅಮೃತ್ ಶೆಣೈ
ಪ್ರಮೋದ್ ಮಧ್ವರಾಜ್ ಹೇಳಿಕೆಗೆ ಖಂಡನೆ – ಅಮೃತ್ ಶೆಣೈ
ವಿಪಕ್ಷಗಳ ಒಕ್ಕೂಟ I N D I A ಗೆ ಲೇವಡಿ ಮಾಡುತ್ತಾ ಪ್ರಮೋದ್ ರವರು ಅದು ಒಂದು ಪೈಲಟ್ ಇಲ್ಲದ ವಿಮಾನ ಎಂಬ ಹೇಳಿಕೆ ನೀಡಿದ್ದನ್ನು ಕೆಪಿಸಿಸಿ ಮಾಧ್ಯಮ ವಿಭಾಗದ ಪ್ರಧಾನ ಕಾರ್ಯದರ್ಶಿ ಅಮೃತ್ ಶೆಣೈ ತೀವ್ರವಾಗಿ ಖಂಡಿಸಿದ್ದಾರೆ
ಪ್ರಮೋದ್ ಲೋಕಸಭೆ ಚುನಾವಣೆಯ ಬಗ್ಗೆ ಮತ್ತೆ ಮಾತಾಡಲಿ,ಈಗ ಅವರು ಥಟ್ ಎಂದು ಕರ್ನಾಟಕ ವಿಧಾನಸಭೆಯಲ್ಲಿ ಬಿಜೆಪಿ ಎಂಬ ವಿಮಾನಕ್ಕೆ ಪೈಲಟ್ ಯಾರು ಎಂದು ಸೂಚಿಸಲಿ,
ಪ್ರಧಾನಿ ಮೋದಿಯವರ ದುರಾಡಳಿತಕ್ಕೆ ಒಂದು ಅಂತ್ಯ ಕಾಣಿಸಬೇಕೆಂಬ ಉದ್ದೇಶದಿಂದ ಪರಸ್ಪರ ಭಿನ್ನಾಭಿಪ್ರಾಯಗಳನ್ನು ಬದಿಗೆ ಇಟ್ಟು ದೇಶದ ಬಹುತೇಕ ಪ್ರಬಲ ರಾಜಕೀಯ ಪಕ್ಷಗಳು ಹಲವಾರು ರಾಜ್ಯಗಳ ಮುಖ್ಯಮಂತ್ರಿಗಳಾದಿಯಾಗಿ ಕಾಂಗ್ರೆಸ್ ಜತೆ ಸೇರಿ ಒಕ್ಕೂಟ ರಚಿಸಿದ್ದು ಸದಾ ಮೋದಿಭಜನೆ ಮಾಡುತ್ತಿರುವ ಪ್ರಮೋದ್ ಮಧ್ವರಾಜ್ ರವರ ನಿದ್ದೆಗೆಡಿಸಿದೆ, ಅವರು ಮಾತೆತ್ತಿದ್ದರೆ ತಾನು ಮೋದಿಯವರನ್ನು ನೋಡಿ ಬಿಜೆಪಿ ಸೇರಿದ್ದೇನೆ ಅನ್ನುತ್ತಾ ಕಾಂಗ್ರೆಸ್ ಅನ್ನು ಟೀಕೆ ಮಾಡುತ್ತಾ ಇರುತ್ತಾರೆ,ಅವರು ಮೋದಿ ನೇತೃತ್ವದ ಎನ್ ಡಿ ಎ ಸೋಲುವುದನ್ನೂ ಮುಂದಿನ ವರ್ಷ ನೋಡಲಿದ್ದಾರೆ ಎಂದು ಶೆಣೈಯವರು ತಿಳಿಸಿದ್ದಾರೆ




