
Featured Story
ಟ್ರಕ್ಕಿಗೆ ಕಾರು ಡಿಕ್ಕಿಯಾಗಿ ಐದು ಮಂದಿ ಮೃತ್ಯು; ಒರ್ವ ಗಂಭೀರ
ಉ.ಪ್ರ: ಸ್ಟೆಷನರಿ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಟ್ರಕ್ಕಿಗೆ ಕಾರು ಡಿಕ್ಕಿಯಾದ ಪರಿಣಾಮ ಐದು ಮಂದಿ ಮೃತಪಟ್ಟರೆ ಒರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಈಶಾನ್ಯ ಭಾಗದ ಹೆದ್ದಾರಿಯಲ್ಲಿ ವರದಿಯಾಗಿದೆ.
ಘಟನೆಯಲ್ಲಿ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು ಕ್ರೈನ್ ಮುಖಾಂತರ ತೆರವುಗೊಳಿಸಲಾಗಿದೆ. ಕುಟುಂಬವು ಲಕ್ನೊದಿಂದ ಜರ್ಖಾಂಡ್ ಕಡೆಗೆ ಹೋಗುತ್ತಿದ್ದರು ಎಂದು ತಿಳಿದು ಬಂದಿದೆ. ಅತೀ ವೇಗದ ಕಾರಣ ನಿಯಂತ್ರಣ ತಪ್ಪಿ ದುರ್ಘಟನೆ ಸಂಭವಿಸಿದೆಯೆಂದು ಸರ್ಕಲ್ ಇನ್ಸ್ಪೆಕ್ಟರ್ ಅಲೋಕ್ ಪ್ರಸಾದ್ ತಿಳಿಸಿದ್ದಾರೆ.
ಈ ದುರ್ಘಟನೆಯ ಕುರಿತು ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ಸೂಚಿಸಿದ್ದಾರೆ. ಕಾರಿನಲ್ಲಿ ಏಳು ಮಂದಿಯಿದ್ದು ಐದು ಮಂದಿ ಸ್ಥಳದಲ್ಲಿ ಮೃತಪಟ್ಟರೆ ಉಳಿದಿಬ್ಬರು ಗಾಯಗೊಂಡಿದ್ದಾರೆ.




