ಕುಶಾಲನಗರದ ಕೂರ್ಗ್ ಸಿನಿ ಪ್ಲೆಕ್ಸ್ ಸಮೀಪ ನೆನ್ನೆ ರಾತ್ರಿ ಬುಲೆಟ್ ಮತ್ತು ಸ್ಕೂಟಿ ನಡುವೆ ಸಂಭವಿಸಿದ ಅಪಘಾತದಲ್ಲಿ ಇಂದಿರಾ ಬಡಾವಣೆ ನಿವಾಸಿ ಪೂಣಚ್ಚ ಎಂಬುವವರ ಪುತ್ರಿ ಭಾವನ (21) ಎಂಬುವವರು ಮೃತಪಟ್ಟಿದ್ದಾರೆ.
ಬೈಕ್ ಅಪಘಾತ:
ಇಂದು ಬೆಳಿಗ್ಗೆ ಬೆಟ್ಟದಪುರದ ಕೆ ಆರ್ ನಗರ ಮುಖ್ಯರಸ್ತೆಯಲ್ಲಿ ಡಾಕ್ಟರ್ ತಮ್ಮಯ್ಯ ಅವರ ತೋಟದ ತಿರುವಿನಲ್ಲಿ ಅಪಘಾತ ಸಂಭವಿಸಿ ಕುಶಾಲನಗರ ತಾಲೂಕು ತೊರೆನೂರು ಗ್ರಾಮದ ಮಂಜುನಾಥ್ ಎಂಬುವರು ಮೃತಪಟ್ಟಿದ್ದಾರೆ ಇವರ ಪತ್ನಿ ತೀವ್ರವಾಗಿ ಗಾಯಗೊಂಡಿದ್ದು ಮೈಸೂರಿಗೆ ರವಾನಿಸಲಾಗಿದ ಅಪಘಾತ ಸ್ಥಳಕ್ಕೆ ಬೆಟ್ಟದಪುರ ಪೊಲೀಸರು ಆಗಮಿಸಿ ಗಾಯಗೊಂಡವರನ್ನು ಪಿರಿಯಾಪಟ್ಟಣ ಆಸ್ಪತ್ರೆಗೆ ಸಾಗಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
