ಮಂಗಳೂರು: ಅಪಘಾತಕ್ಕೆ ಬಾಲಕರಿಬ್ಬರು ಮೃತ್ಯು

ಮಂಗಳೂರು, ಜೂನ್ 29: ನಗರದ ಮೇರಿಹಿಲ್ ಬಳಿ ಜೂನ್ 28 ರ ಬುಧವಾರ ತಡರಾತ್ರಿ ಸ್ಕೂಟರ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ.

ಮೃತರನ್ನು ಪವನ್ (16) ಮತ್ತು ಚಿರಾಗ್ (15) ಎಂದು ಗುರುತಿಸಲಾಗಿದೆ. ಇಬ್ಬರೂ ಸ್ಥಳೀಯ ನಿವಾಸಿಗಳಾಗಿದ್ದರು.

ಓರ್ವ ಬಾಲಕ ಸ್ಥಳದಲ್ಲೇ ಮೃತಪಟ್ಟರೆ, ಗಾಯಗೊಂಡ ಮತ್ತೊಬ್ಬನನ್ನು ಖಾಸಗಿ ಬಸ್‌ನಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ದಾರಿಯಲ್ಲಿ ಅವನೂ ಸಾವಿಗೀಡಾದ.

ಬೈಕ್‌ ಪದವಿನಂಗಡಿ ನಿವಾಸಿ ಕುಶಾಲ್‌ ಕುಮಾರ್‌ ಎಂಬುವವರ ಹೆಸರಿನಲ್ಲಿದೆ ಎಂದು ತಿಳಿದು ಬಂದಿದೆ.

Latest Indian news

Popular Stories