ಸೆಲ್ಯೂಟ್ ಹೊಡೆಯುತ್ತಿದ್ದ ಅಣ್ಣಾ ಮಲೈ ಬಂದು ಇಲ್ಲಿ ಉಸ್ತುವಾರಿ – ಬಿಜೆಪಿ ಹೈಕಮಾಂಡ್ ವಿರುದ್ಧ ರೇಣುಕಾಚಾರ್ಯ ಕೆಂಡಾಮಂಡಲ

ಬೆಂಗಳೂರು: ಬಿಜೆಪಿಯಲ್ಲಿ ಅಂತರಿಕ ಕಲಹ ಶಮನವಾಗುವುದು ಕಾಣಿಸುತ್ತಿಲ್ಲ. ಹಿರಿ ತಲೆಗಳಿಗೆ ಕೋಕ್ ನೀಡಿದ್ದ ಬಿಜೆಪಿಗೆ ಇದೀಗ ರಾಜ್ಯದಲ್ಲಿ ಅಂತರಿಕ ಕಲಹ ದೊಡ್ಡ ತಲೆ ನೋವಾಗಿದೆ. ಇದೀಗ ಬಿಜೆಪಿ ಮುಖಂಡ ರೇಣುಕಾಚರ್ಯ ಸುದ್ದಿಗೋಷ್ಠಿ ನಡೆಸಿ ಅಸಮಾಧಾನ ಹೊರ ಹಾಕಿದ್ದು ತಮಿಳುನಾಡಿನಿಂದ ಬಂದು ಅಣ್ಣಾಮಲೈ ಇಲ್ಲಿ ಉಸ್ತುವಾರಿ ನೋಡಿಕೊಂಡರು. ಮುಖ್ಯಮಂತ್ರಿಗೆ ಸೆಲ್ಯುಟ್ ಹೊಡೆಯುವವರು ನಮಗೆ ಮಾರ್ಗದರ್ಶನ ಮಾಡುವಂತಾಯಿತು ಎಂದು ಆಕ್ರೋಶ ಹೊರ ಹಾಕಿದ್ದಾರೆ.

ನಾವು ಕುರಿಗಳು, ಬಕ್ರಾಗಳ ಎಂದು ಈ ಸಂದರ್ಭದಲ್ಲಿ ಪ್ರಶ್ನಿಸಿದ್ದಾರೆ. ಯಡಿಯೂರಪ್ಪ, ಅನಂತ್ ಕುಮಾರ್ ಸಾಥ್ ಕೊಟ್ಟಂತಹ ಈಶ್ವರಪ್ಪ, ಜಗದೀಶ್ ಶೆಟ್ಟರ್ ಎಲ್ಲರನ್ನು ಮುಗಿಸಿ ಬಿಟ್ಟರು. ಬಸವರಾಜ್ ಬೊಮ್ಮಾಯಿ‌ ಅವರನ್ನು ‌ಮುಖ್ಯಮಂತ್ರಿ ಮಾಡಿ ಎರಡು ಕೈ ಕಟ್ಟಿ ಹಾಕಿ ಏನು ಮಾಡದ ಹಾಗೆ ಮಾಡಿದರು ಎಂದು ಹೇಳಿದರು.

Latest Indian news

Popular Stories