ಕ್ರಿಕೆಟ್ ವಿಶ್ವಕಪ್: ನಾಲ್ಕು ಪ್ರಬಲ ತಂಡ ಆಯ್ಕೆ ಮಾಡಿದ ಆ್ಯಡಮ್ ಗಿಲ್‌ಕ್ರಿಸ್ಟ್‌

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್ ದಂತಕಥೆ, ಆಡಮ್ ಗಿಲ್ಕ್ರಿಸ್ಟ್ ಅವರು ODI ನಲ್ಲಿ ಆಸ್ಟ್ರೇಲಿಯಾದ ಮುಂಬರುವ ಪಂದ್ಯಾಟದ ಕುರಿತು ತಮ್ಮ ಚಿಂತನೆ ಹಂಚಿಕೊಂಡಿದ್ದಾರೆ . ಜೊತೆಗೆ ಪಂದ್ಯಾವಳಿಯಲ್ಲಿ ಸೆಮಿ-ಫೈನಲ್ ಪ್ರವೇಶಿಸುವವರ ಕುರಿತು ಭವಿಷ್ಯ ನುಡಿದಿದ್ದಾರೆ.

ಸುಮಾರು 400 ಪಂದ್ಯಗಳನ್ನು ಆಡಿರುವ ಗಿಲ್’ಗ್ರಿಸ್ಟ್, ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಸೋತರೂ ಆಸ್ಟ್ರೇಲಿಯಾದ ಪ್ರದರ್ಶನದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಹಿನ್ನಡೆಗಳು ತಂಡಕ್ಕೆ ಅಮೂಲ್ಯವಾದ ಅನುಭವ ತಂದು ಕೊಡುತ್ತದೆ ಎಂದು ಅವರು ನಂಬುತ್ತಾರೆ.

ಗಿಲ್‌ಕ್ರಿಸ್ಟ್ ವಿಶ್ವಕಪ್’ನ ಸೆಮಿ-ಫೈನಲಿಸ್ಟ್‌ಗಳ ಕುರಿತು ಅಂದಾಜಿಸುತ್ತ , “ಭಾರತ ಮತ್ತು ಪಾಕಿಸ್ತಾನವು ಸೆಮಿ-ಫೈನಲ್‌ನಲ್ಲಿ ಭಾಗವಹಿಸಬಹುದು ಎಂದು ನಾನು ಭಾವಿಸುತ್ತೇನೆ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಇನ್ನೆರಡು ತಂಡಗಳು ಕೂಡ ಸೆಮಿ ಪ್ರವೇಶಿಸಬಹುದೆಂದು ಅವರು ಹೇಳಿದ್ದಾರೆ.

Latest Indian news

Popular Stories