ಭಾರತದಿಂದ ಕೆನಡಾದ ಹಿರಿಯ ರಾಜತಾಂತ್ರಿಕರ ಉಚ್ಛಾಟನೆ

ಜೂನ್‌ನಲ್ಲಿ ಖಲಿಸ್ತಾನಿ ಭಯೋತ್ಪಾದಕನ ಹತ್ಯೆಯಲ್ಲಿ ಭಾರತದ ಪಾತ್ರವಿದೆ ಎಂಬ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಅವರ ಆರೋಪದ ಮೇಲೆ ಭಾರತವು ಕೆನಡಾದ ಹಿರಿಯ ರಾಜತಾಂತ್ರಿಕರನ್ನು ಉಚ್ಛಾಟನೆ ಮಾಡಿದೆ. ಹೆಸರು ಹೇಳಲಿಚ್ಛಿಸದ ರಾಜತಾಂತ್ರಿಕರು ದೇಶ ತೊರೆಯಲು ಐದು ದಿನಗಳು ನೀಡಲಾಗಿದೆ.

ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಸರ್ಕಾರವು ಹರ್ದೀಪ್ ಸಿಂಗ್ ನಿಜ್ಜರ್ ಅವರ ಹತ್ಯೆಯನ್ನು “ಭಾರತ ಸರ್ಕಾರದ ಏಜೆಂಟರು” ನೊಂದಿಗೆ ಜೋಡಿಸುವ “ವಿಶ್ವಾಸಾರ್ಹ ಆರೋಪಗಳನ್ನು” ಹೊಂದಿದೆ ಎಂದು ಹೇಳಿದರು. ಭಾರತ ಸರ್ಕಾರವು “ಅಸಂಬದ್ಧ ಮತ್ತು ಪ್ರೇರಿತ” ಆರೋಪ ಎಂದು ಅವರ ಹೇಳಿಕೆಯನ್ನು ತಿರಸ್ಕರಿಸಿದೆ.

ಕೆನಾಡ ಭಾರತದ ಮೇಲೆ ಆರೋಪದ ನಂತರ ಭಾರತದ ರಾಜತಾಂತ್ರಿಕರನ್ನು ಉಚ್ಚಾಟಿಸಿತ್ತು. ಇದೀಗ ಅದಕ್ಕೆ ಪ್ರತಿಕ್ರಿಯೆಯಾಗಿ ಕೆನಡಾದ ಹಿರಿಯ ರಾಜತಾಂತ್ರಿಕತನ್ನು ಭಾರತ ಉಚ್ಚಟಿಸಿದೆ. ಈ ಮೂಲಕ ಎರಡು ದೇಶಗಳ ಸಂಬಂಧದಲ್ಲಿ ಗಣನೀಯ ಬಿರುಕು ಕಾಣಿಸಿಕೊಂಡಿದೆ.

Latest Indian news

Popular Stories