ಕಾಶ್ಮೀರದಲ್ಲಿ ಯುನಿಫರ್ಮ್ ಸಿವಿಲ್ ಕೋಡ್ ಮೇಲೆ ಸೆಮಿನಾರ್ ಆಯೋಜಿಸಿದ್ದ ಸೇನೆ; ವಿವಾದಾತ್ಮಕ ಕಾರ್ಯಕ್ರಮ ಆಯೋಜನೆಗೆ ಆಕ್ಷೇಪ – ರದ್ದು

ಕಾಶ್ಮೀರ ವಿಶ್ವವಿದ್ಯಾನಿಲಯದಲ್ಲಿ ‘ಏಕರೂಪ ನಾಗರಿಕ ಸಂಹಿತೆ’ ಕುರಿತು ಭಾರತೀಯ ಸೇನೆ ಸೆಮಿನಾರ್ ಆಯೋಜಿಸಲು ಮುಂದಾಗಿತ್ತು. ಈ ರಾಜಕೀಯ ಪ್ರೇರಿತ ಕಾರ್ಯಕ್ರಮಕ್ಕೆ ಜೆ & ಕೆ ಮಾಜಿ ಮುಖ್ಯಮಂತ್ರಿಗಳು ಮತ್ತು ನಿವೃತ್ತ ಸೇನಾ ಅಧಿಕಾರಿ ಸೇರಿದಂತೆ ಇತರರು ಭಾರೀ ಆಕ್ಷೇಪ ವ್ಯಕ್ತಪಡಿಸಿ ಸೇನೆಯು ಇಂತಹ ವಿವಾದಾತ್ಮಕ ವಿಚಾರಗಳಿಂದ ದೂರವಿರಬೇಕೆಂದು ಬಲವಾಗಿ ಆಗ್ರಹಿಸಿದ್ದರು.

ಇದೀಗ ಆಕ್ಷೇಪದ ನಂತರ ಸೇನೆಯು ಕಾರ್ಯಕ್ರಮವನ್ನು ರದ್ದುಗೊಳಿಸಿದೆ. ಚುನಾವಣಾ ಮಾದರಿ ನೀತಿ ಸಂಹಿತೆಯ ಕಾರಣಕ್ಕೆ ಸೆಮಿನಾರ್ ರದ್ದುಗೊಳಿಸಿರುವುದಾಗಿ ಕಾರಣವನ್ನು ವಿವರಿಸಲಾಗಿದೆ.

ಕೇಂದ್ರ ಬಿಜೆಪಿ ಸರಕಾರ ವಿವಾದ ಮತ್ತು ವಿರೋಧ ನಡುವೆ ಯುನಿಫರ್ಮ್ ಸಿವಿಲ್ ಕೋಡ್ ಜಾರಿಗೆ ತರಲು ಹೊರಟಿರುವುದು ರಾಜಕೀಯದ ಭಾಗ ಎಂದು ಟೀಕೆಗಳು ಕೇಳಿ ಬಂದಿದ್ದು ಈ ರಾಜಕೀಯದಲ್ಲಿ ಸೇನೆಯನ್ನು ಬಳಸಿಕೊಳ್ಳಲು ಮುಂದಾಗಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.

‘ನ್ಯಾವಿಗೇಟಿಂಗ್ ಲೀಗಲ್ ಫ್ರಾಂಟಿಯರ್ಸ್: ಅಂಡರ್‌ಸ್ಟ್ಯಾಂಡಿಂಗ್ ಇಂಡಿಯನ್ ಪೀನಲ್ ಕೋಡ್ 2023 & ಕ್ವೆಸ್ಟ್ ಫಾರ್ ಯೂನಿಫಾರ್ಮ್ ಸಿವಿಲ್ ಕೋಡ್’ ಎಂಬ ಶೀರ್ಷಿಕೆಯ ಒಂದು ದಿನದ ಸೆಮಿನಾರ್ ಅನ್ನು ಕಾಶ್ಮೀರ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಸೇನೆಯ ಹೆಚ್‌ಕ್ಯು 31 ಸಬ್ ಏರಿಯಾ ಆಯೋಜಿಸಿತ್ತು. ಮಾರ್ಚ್ 26 ರಂದು ಕಾರ್ಯಕ್ರಮ ನಿಗದಿಯಾಗಿತ್ತು. ಇದೀಗ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕಾರ್ಯಕ್ರಮ ರದ್ದಾಗಿದೆ.

ದಿ ವೈರ್‌ನೊಂದಿಗೆ ಮಾತನಾಡಿದ ಲೆಫ್ಟಿನೆಂಟ್ ಜನರಲ್ ದೀಪೇಂದ್ರ ಸಿಂಗ್ ಹೂಡಾ ಅವರು ಜೆ & ಕೆ ನಲ್ಲಿ ಸೇನೆಯ ಕಾರ್ಯತಂತ್ರದ ಉತ್ತರ ಕಮಾಂಡ್‌ನ ಮುಖ್ಯಸ್ಥರಾಗಿದ್ದಾರೆ. ಸೇನೆಯು ರಾಜಕೀಯ ಮತ್ತು ಧಾರ್ಮಿಕ ವಿಷಯಗಳಿಂದ ದೂರವಿರಬೇಕು ಎಂದು ಹೇಳಿದರು.

“ನನ್ನ ವೈಯಕ್ತಿಕ ದೃಷ್ಟಿಕೋನವೆಂದರೆ ರಾಜಕೀಯ ಅಥವಾ ಧಾರ್ಮಿಕ ಚರ್ಚೆಗಳಿಂದ ಸೇನೆ ದೂರವಿರಬೇಕು. ವಿಶೇಷವಾಗಿ ಸಾರ್ವಜನಿಕ ಚರ್ಚೆಯಿಂದ ದೂರವಿರಬೇಕು” ಎಂದು ಲೆಫ್ಟಿನೆಂಟ್ ಜನರಲ್ ಹೂಡಾ ಹೇಳಿದರು.

Latest Indian news

Popular Stories