ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಪೋಸ್ಟರ್ ಅಂಟಿಸಿದ ಆರೋಪ: ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರ ಮೇಲೆ ಎಫ್‌.ಐ.ಆರ್

ಉಡುಪಿ: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಪೋಸ್ಟರ್ ಹಚ್ಚಿದ ಆರೋಪದ ಮೇಲೆ ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಾಗಿದೆ.

ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಬನ್ನಂಜೆ KSRTC ಬಸ್ ನಿಲ್ದಾಣ ತಲುಪಿ ನೋಡಲಾಗಿ ಬಸ್ ನಿಲ್ದಾಣದ ಫ್ಲಾಟ್ಫಾರ್ಮ್ ನ ಎರಡು ಕಂಬಗಳಿಗೆ ಹಾಗೂ ಒಂದು ಪೋಸ್ಟರ್‌ನ್ನು ಗೋಡೆಗೆ ಮುಂದುವರೆದು ಕರಾವಳಿ ಬೈಪಾಸ್‌ನ ಫ್ಲೈ ಓವರ್‌ಕೆಳಗಡೆಯ ಗೋಡೆಯ ಮೇಲೆ ಮೂರು ಪೋಸ್ಟರ್‌ಗಳನ್ನು ಪ್ರಸ್ತುತ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರು ಸಹಾ ಯಾವುದೇ ಸಕ್ಷಮ ಪ್ರಾಧಿಕಾರ ಮತ್ತು ಚುನಾವಣಾ ಅಧಿಕಾರಿಯವರಿಂದ ಪೂರ್ವಾನುಮತಿಯನ್ನು ಪಡೆದುಕೊಳ್ಳದೇ ಹಾಗೂ ಕರಪತ್ರದಲ್ಲಿ ಮುದ್ರಣ ಕುರಿತಂತೆ ಪ್ರಕಾಶಕರ ವಿವರ ನಮೂದಿಸದೇ ಒಂದು ಪಕ್ಷದ ವಿರುದ್ಧವಾಗಿ ಮುದ್ರಿಸಿರುವ ಪೋಸ್ಟರ್‌ಗಳನ್ನು ಅಂಟಿಸಿರುವುದು ಕಂಡುಬಂದಿದೆ.

ಈ ಪೋಸ್ಟರ್‌ಗಳನ್ನು ಉಡುಪಿ ನಗರ ಬಿಜೆಪಿ ಯುವ ಮೋರ್ಚಾ ವತಿಯಿಂದ ನೇತೃತ್ವ ವಹಿಸಿದ್ದ ಶ್ರೀವತ್ಸಾ, ಶಿವಪ್ರಸಾದ್‌, ಧನುಷ್‌ ಹಾಗೂ ಇತರರು ಸೇರಿಕೊಂಡು ಅಂಟಿಸಿರುವುದಾಗಿ ತಿಳಿದುಬಂದಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 81/2024, ಕಲಂ: 3 KARNATAKA OPEN PLACE DISFIGUREMENT ACT 1981 & ಕಲಂ: 127A RP Act ರಂತೆ ಪ್ರಕರಣ ದಾಖಲಾಗಿರುತ್ತದೆ.

Latest Indian news

Popular Stories