ಮಹಿಳೆ ಅಪಹರಣ ಪ್ರಕರಣ: ರೇವಣ್ಣ ಬಂಧನ ಬೆನ್ನಲ್ಲೇ ಭವಾನಿ ರೇವಣ್ಣರಿಗೂ ವಿಚಾರಣೆಯ ನೋಟಿಸ್ ನೀಡುವ ಸಾಧ್ಯತೆ

ಬೆಂಗಳೂರು: ಸಂತ್ರಸ್ತೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ರೇವಣ್ಣ ಬಂಧನವಾದ ಬೆನ್ನಲ್ಲೇ ಭವಾನಿ ರೇವಣ್ಣ ಅವರಿಗೂ ಇದೀಗ ಕಾನೂನು ಕಾನೂನು ಸಂಕಷ್ಟ ಶುರುವಾಗಿದೆ.

ಭವಾನಿ ರೇವಣ್ಣ ಕರೆಯುತ್ತಿದ್ದಾರೆ ಎಂದು ಹೇಳಿ ನನ್ನ ತಾಯಿಯನ್ನು ಸತೀಶ್‌ ಬಾಬು ಕರೆದೊಯ್ದಿದ್ದಾರೆ ಎಂದು ಸಂತ್ರಸ್ತ ಮಹಿಳೆಯ ಪುತ್ರ ದೂರು ನೀಡಿದ್ದರು.

ಲೋಕಸಭಾ ಚುನಾವಣೆಗೆ ಮೂರ್ನಾಲ್ಕು ದಿನಗಳು ಇರುವಾಗ ಪರಿಚಿತರಾದ ಸತೀಶ್ ಬಾಬು ಅವರು ನಮ್ಮ ಮನೆಗೆ ಬಂದಿದ್ದರು. ಭವಾನಿ ಅಕ್ಕ ನಿಮ್ಮನ್ನು ಕರೆದುಕೊಂಡು ಬರಲು ಹೇಳಿದ್ದಾರೆ ಎಂದು ನಮ್ಮ ತಾಯಿಯನ್ನು ಜೊತೆಯಲ್ಲಿ ಹೊಳೆನರಸೀಪುರಕ್ಕೆ ಕರೆದುಕೊಂಡು ಹೋಗಿದ್ದರು. ಮತದಾನದ ದಿನದ ಬೆಳಗ್ಗೆ ಸತೀಶ್ ನನ್ನ ತಾಯಿಯನ್ನು ವಾಪಾಸ್ ಮನೆಗೆ ಕರೆದುಕೊಂಡು ಬಂದಿದ್ದರು. ಪೊಲೀಸಿನವರು ಬಂದರೆ ಅವರಿಗೆ ಏನನ್ನೂ ಹೇಳಬೇಡಿ. ಅವರಿಗೆ ಸಿಗಬೇಡಿ. ನಿಮ್ಮ ಮೇಲೆ ಕೇಸ್ ಆಗುತ್ತದೆ. ಪೊಲೀಸರು ಬಂದರೆ ನನಗೆ ತಿಳಿಸಿ ಎಂದು ತಂದೆ-ತಾಯಿ ಹೇಳಿ ಹೋಗಿದ್ದರು’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಭವಾನಿ ಅವರಿಗೆ ನೋಟಿಸ್‌ ಜಾರಿ ಮಾಡಿ ವಿಶೇಷ ತನಿಖಾ ತಂಡ ವಿಚಾರಣೆ ನಡೆಸುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ. ಈಗಾಗಲೇ ಈ ಪ್ರಕರಣದಲ್ಲಿ ಸತೀಶ್ ಬಾಬು ಮತ್ತು ಎಚ್.ಡಿ.ರೇವಣ್ಣ ಅವರ ಬಂಧನವಾಗಿದೆ.

Latest Indian news

Popular Stories