ಉದಯನಿಧಿ ಸ್ಟಾಲಿನ್ ದಕ್ಷಿಣ ಭಾರತದ ಪಪ್ಪು: ಬಿಜೆಪಿ ಮುಖಂಡ ಅಣ್ಣಾಮಲೈ ವ್ಯಂಗ್ಯ

ಚೆನ್ನೈ: ತಮಿಳುನಾಡು ಸಿಎಂ ಸ್ಟಾಲಿನ್‌ ಪುತ್ರ ಉದಯನಿಧಿ ಸ್ಟಾಲಿನ್‌ ಸನಾತನ ಧರ್ಮದ ಬಗ್ಗೆ ನೀಡಿದ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಈಗ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ವ್ಯಂಗ್ಯವಾಡಿದ್ದಾರೆ.

ರಾಹುಲ್ ಗಾಂಧಿ ಮೋದಿ ಸಮುದಾಯದ ಬಗ್ಗೆ ಮಾತನಾಡಿದಂತೆ ಸನಾತನ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್ ಮಾತನಾಡಿದ್ದಾರೆ. ಈ ಹಿನ್ನೆಲೆ ರಾಹುಲ್ ಗಾಂಧಿ ಉತ್ತರ ಭಾರತದ ಪಪ್ಪು ಆದ್ರೆ, ದಕ್ಷಿಣ ಭಾರತದ ಪಪ್ಪು ಉದಯನಿಧಿ ಸ್ಟಾಲಿನ್ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಟೀಕಿಸಿದ್ದಾರೆ.

ಈ ಸಂಬಂಧ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ, ರಾಹುಲ್ ಗಾಂಧಿ ಮೋದಿ ಸಮುದಾಯದ ಬಗ್ಗೆ ಮಾತನಾಡಿದಂತೆ ಸನಾತನ ಬಗ್ಗೆ ಉದಯನಿಧಿ ಸ್ಟಾಲಿನ್ ಮಾತನಾಡಿದ್ದಾರೆ. ಈ ಹಿನ್ನೆಲೆ ಉತ್ತರ ಭಾರತದ ಪಪ್ಪು ರಾಹುಲ್ ಗಾಂಧಿ ಆದ್ರೆ, ದಕ್ಷಿಣ ಭಾರತದ ಪಪ್ಪು ಉದಯನಿಧಿ ಎಂದಿದ್ದಾರೆ.

ಅವರು ಹೀಗೆಯೇ ಮಾತನಾಡುತ್ತಾ ಹೋದರೆ ‘I.N.D.I.A’ ಮೈತ್ರಿಕೂಟದ ಮತಬ್ಯಾಂಕ್ ಕುಸಿಯುತ್ತಲೇ ಹೋಗುತ್ತದೆ. ಈಗ ‘I.N.D.I.A’ ಮೈತ್ರಿಕೂಟದ ಮತಗಳ ಪ್ರಮಾಣ ಶೇಕಡಾ ಐದಕ್ಕೆ ಇಳಿದಿದೆ. ಉದಯನಿಧಿ ಹೀಗೆಯೇ ಮುಂದುವರಿದರೆ, ‘I.N.D.I.A’  ಮೈತ್ರಿಕೂಟದ ಮತಗಳು ಶೇಕಡಾ 20 ರಷ್ಟು ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ.

Latest Indian news

Popular Stories