ಬ್ಲ್ಯಾಕ್ ಆ್ಯಂಡ್ ವೈಟ್ ಮನಿ ಹೆಸರಿನಲ್ಲಿ ಮೋಸ: ನಾಲ್ವರ ಬಂಧನ

ವಿಜಯಪುರ: ಬ್ಲ್ಯಾಕ್ ಆ್ಯಂಡ್ ವೈಟ್ ಮನಿ ಹೆಸರಿನಲ್ಲಿ ರೈತನಿಗೆ ಮೋಸಗೈದಿರುವ ನಾಲ್ವರನ್ನು ಬಂಧಿಸಲಾಗಿದೆ ಎಂದು ಎಸ್‌ಪಿ ಎಚ್‌.ಡಿ ಆನಂದಕುಮಾರ ಹೇಳಿದರು.

ವಿಜಯಪುರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಬಲೇಶ್ವರದ ರೈತ ಚಂದ್ರಶೇಖರ ಕನ್ನೂರ ಅವರಿಗೆ ನಾಲ್ವರು ಬ್ಲ್ಯಾಕ್ ಆ್ಯಂಡ್ ವೈಟ್ ಮನಿ ಹೆಸರಿನಲ್ಲಿ ಮೋಸ ಮಾಡಿದ್ದರು. ಈ ಕುರಿತು ಸಿಇಎನ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಲಕ್ಷ್ಮೀ ಕಂಕನವಾಡಿ, ಈರಣ್ಣ ಕೌಜಲಗಿ, ಅಪ್ಪಾಸಾಹೇಬ್ ಇಂಚಲ್, ಸುನೀಲ ದೊಡಮನಿ ಎಂಬುವವರನ್ನು ಬಂಧನ ಮಾಡಲಾಗಿದೆ ಎಂದರು.

ಅಲ್ಲದೇ, ವೈಟ್ ಮನಿ ನೀಡಿದರೆ ದುಪ್ಪಟ್ಟು ಹಣ ನೀಡುವುದಾಗಿ ಆಸೆ ತೋರಿಸಿದ್ದಾರೆ. ಇದನ್ನು ನಂಬಿ ರೈತ ಇವರಿಗೆ 20 ಲಕ್ಷ ಹಣ ನೀಡಿದ್ದಾನೆ. ಇನ್ನು ರೈತನಿಗೆ ಖಾಲಿ ಪೇಪರ್ ಹಾಗೂ ನೋಟ್‌ಬುಕ್‌ ಹಾಕಿ ಪ್ಯಾಕ್ ಮಾಡಿದ ಒಂದು ರಟ್ಟಿನ ಬಾಕ್ಸ್ ತೋರಿಸಿ ಅದರಲ್ಲಿ ಒಂದು ಕೋಟಿ ಇದೆ ಎಂದು ನಂಬಿಸಿ 20 ಲಕ್ಷ ಹಣ ಪಡೆದುಕೊಂಡು ಮೋಸ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಇಎನ್ ಪೊಲೀಸ ಠಾಣಾ ಇನ್ಸ್‌ಪೆಕ್ಟರ್ ರಮೇಶ ಅವಜಿ ನೇತೃತ್ವದ ತಂಡದವರು ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.

ಇನ್ನು ಸಾರ್ವಜನಿಕರು ಇಂತಹ ಪ್ರಕರಣಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಹಣದ ಆಸೆಗಾಗಿ ಮೋಸ ಹೋಗಬಾರದು. ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಪೊಲೀಸ ಠಾಣೆ ಅಥವಾ 112ಗೆ ಸಂಪರ್ಕಿಸಿ ಎಂದು ಮನವಿ ಮಾಡಿದರು.

Latest Indian news

Popular Stories