ಕೇವಲ ಭಾವನಾತ್ಮಕ ವಿಷಯಗಳನ ಮುಂದಿಟ್ಟುಕೊಂಡು ರಾಜಕೀಯ ಮಾಡುವ ಬದಲಿಗೆ ಅಭಿವೃದ್ಧಿ ರಾಜಕಾರಣ ಮಾಡಲಿ-ಶಾಸಕ ಎ.ಎಸ್.ಪೊನ್ನಣ್ಣ ತಿರುಗೇಟು

ವಿಧಾನಸಭಾ ಚುನಾವಣೆಗೆ 15 ದಿನಗಳು ಇರುವ ಸಂದರ್ಭ ಹಿಂದಿನ ಬಿಜೆಪಿ ಸರಕಾರ ಮತಗಳಿಕೆಯ ಉದ್ದೇಶದಿಂದ ಕೊಡವ ಅಭಿವೃದ್ಧಿ ನಿಗಮ ಘೋಷಣೆ ಮಾಡಿತ್ತು ಆದರೆ ಇಂದಿಗೂ ಕೊಡವ ಅಭಿವೃದ್ಧಿ ನಿಗಮ ಕಂಪನಿ ಆ್ಯಕ್ಟ್ ನಡಿ ನೋಂದಣಿ ಆಗಿಲ್ಲ. ನಿಗಮ ನೋಂದಣಿ ಆಗದಿರುವ ಬಗ್ಗೆ ಸ್ವತಃ ಸಂಸದ ಪ್ರತಾಪ್ ಸಿಂಹ ಅವರೇ ನಿನ್ನೆ ಹೇಳಿದ್ದಾರೆ. ಸತ್ಯ ಏನೆಂಬುದು ಅವರ ಬಾಯಿಂದಲೇ ಬಂದಿದೆ-ಶಾಸಕ ಎ.ಎಸ್.ಪೊನ್ನಣ್ಣ ಹೇಳಿಕೆ

ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಎ.ಎಸ್.ಪೊನ್ನಣ್ಣ ಅವರು, ನಿಗಮ ಘೋಷಣೆ ಆದಲ್ಲಿ ನಿಗಮಕ್ಕೆ ಮುಖ್ಯಸ್ಥರು, ನಿರ್ದೇಶಕರು, ಸಿಬ್ಬಂದಿಗಳು ಇರುತ್ತಾರೆ. ಆರ್ಥಿಕ ಇಲಾಖೆಯಿಂದ ಅನುಮೋದನೆ ದೊರೆತು ನಿಗಮಕ್ಕೆ ಅನುದಾನ ಬಿಡುಗಡೆಯಾಗುತ್ತದೆ. ಆದರೆ ಸಂಸದರು ಹೇಳುವಂತೆ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಹಣವಿದೆ ಎಂದಾದರೇ ಅದು ನಿಗಮಕ್ಕೆ ಸೇರಿದ್ದಲ್ಲ ಎಂದಾಯಿತಲ್ಲ-ಎ.ಎಸ್.ಪೊನ್ನಣ್ಣ

ಡಿಸಿ ಖಾತೆಯಲ್ಲಿರುವ ಹಣ 2018ರಲ್ಲಿ ಜಿಲ್ಲೆಯ ಅಭಿವೃದ್ದಿಗೆಂದು ಬಿಡುಗಡೆಯಾದ ಹಣ, ಇದರಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳದ ಹಿನ್ನೆಲೆಯಲ್ಲಿ ಹಣ ಡಿಸಿ ಖಾತೆಯಲ್ಲಿ ಹಾಗೇ ಉಳಿದಿದೆ. ಸುಳ್ಳು ಯಾರು ಹೇಳುತ್ತಿದ್ದಾರೆಂದು ಜನರು ತೀರ್ಮಾನ ಮಾಡುತ್ತಾರೆ-ಶಾಸಕ ಎ.ಎಸ್.ಪೊನ್ನಣ್ಣ

ಪೊಲೀಸರು ಅವರ ಕೆಲಸವನ್ನು ಮಾಡಲು ಬಿಡಬೇಕು. ಪೊಲೀಸ್ ಠಾಣೆಗೆ ಹೋಗಿ ಪೊಲೀಸರ ಮೇಲೆ ದರ್ಪ ತೋರುವುದಲ್ಲ. ಈ ಹಿಂದೆ ನಡೆದ ಮೊಟ್ಟೆ ಪ್ರಕರಣದಲ್ಲಿ ನಾನು ಸ್ಥಳದಲ್ಲಿ ಇರದಿದ್ದರೂ ನನ್ನ ಮೇಲೆ ಎಫ್ಐಆರ್ ದಾಖಲಿಸಲಾಗಿತ್ತು, ನಾನಾಗ ಪೊಲೀಸ್ ಠಾಣೆಗೆ ಹೋಗಿದ್ದೇನಾ..? ಈ ಕೇಸಿನಲ್ಲಿ ನನ್ನ ವಿರುದ್ಧ ದೂರು ನೀಡಿದ್ದವರಿಗೆ ಕೋರ್ಟ್ ಛೀಮಾರಿ ಹಾಕಿತ್ತು. ಪೇಸಿಎಂ ಪೋಸ್ಟರ್ ಅಂಟಿಸಿದ ವಿಚಾರಕ್ಕೆ ಕೇಸು ದಾಖಲಿಸಿ ನಮ್ಮನ್ನು ಬಂಧಿಸಿದ್ದಾಗ ನಾವು ಪೊಲೀಸ್ ಠಾಣೆಗೆ ಹೋಗಿರಲಿಲ್ಲ. ಪೊಲೀಸರು ಅವರ ಕೆಲಸ ಅವರು ಮಾಡುತ್ತಾರೆ. ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಜನಪ್ರತಿನಿಧಿಗಳ ಮೇಲಿದೆ-ಸಂಸದರಿಗೆ ಟಾಂಗ್ ನೀಡಿದ ಎ.ಎಸ್.ಪೊನ್ನಣ್ಣ

ಕೊಡಗು ವಿ.ವಿ.ಯನ್ನು ಸ್ಥಾಪಿಸಲಾಗಿದ್ದು, 20 ಕಾಲೇಜುಗಳ ಉಪನ್ಯಾಸಕರಿಗೆ ಕೊಡಲು ಸಂಬಳವೇ ಇಲ್ಲಾ- ಕೇವಲ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊAಡು ರಾಜಕೀಯ ಮಾಡುವ ಬದಲಿಗೆ ಅಭಿವೃದ್ಧಿ ರಾಜಕಾರಣ ಮಾಡಲಿ-ಶಾಸಕ ಎ.ಎಸ್.ಪೊನ್ನಣ್ಣ ತಿರುಗೇಟು

Latest Indian news

Popular Stories