ಅಸ್ಸಾಮ್-ಮೀಝೋರಾಮ್ ಗಡಿ ವಿವಾದ: ಅಮಿತ್ ಶಾ ರನ್ನು ಭೇಟಿಯಾದ ಸಂಸದ ಬದ್ರುದ್ದಿನ್ ಅಜ್ಮಲ್

ನವದೆಹಲಿ: ಅಸ್ಸಾಮ್-ಮೀಝೊರಾಮ್ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಅಲ್ ಇಂಡಿಯಾ ಯುನೈಟೆಡ್ ಡೆಮೊಕ್ರಟಿಕ್ ಫ್ರಂಟ್ ನ ಅಧ್ಯಕ್ಷ ಬದ್ರುದ್ದಿನ್ ಅಜ್ಮಲ್ ಅವರು ಗೃಹ ಸಚಿವ ಅಮಿತ್ ಶಾ ರವನ್ನು ಭೇಟಿಯಾಗಿ ವಿವಾದದ ಕುರಿತು ಚರ್ಚಿಸಿ ಮನವಿ ಸಲ್ಲಿಸಿದರು.

1993 ರ ನೋಟಿಫಿಕೇಷನ್ ಅನ್ನು ಉಲ್ಲಂಘಿಸಿ ಮಿಝೋರಾಮ್ ತನ್ನ ಗಡಿ ಚೆಕ್ ಪೋಸ್ಟ್ ನ್ನು ಸುಮಾರು 6-7 ಕಿ.ಮೀ ಅಸ್ಸಾಮ್ ಗಡಿಯೊಳಗೆ ತಂದು ವಿವಾದ ಸೃಷ್ಟಿಸಿದೆ ಎಂದು ಬದ್ರುದ್ದೀನ್ ಅಜ್ಮಲ್ ಮನವಿಯಲ್ಲಿ ತಿಳಿಸಿದ್ದಾರೆ. ಆದ್ದರಿಂದ 1993 ರ ನೋಟಿಫಿಕೇಷನ್ ನಂತೆ ಎರಡು ರಾಜ್ಯಗಳು ಅಂಗೀಕರಿಸಿರುವ ಗಡಿಯನ್ನು ಇಬ್ಬರು ಕೂಡ ಒಪ್ಪಿ ಮುಂದುವರಿಯುವಂತಾಗಬೇಕೆಂದು ವಿನಂತಿಸಿದ್ದಾರೆ.

ಎರಡು ರಾಜ್ಯಗಳ ಸಂಬಂಧಗಳು ಉತ್ತಮವಾಗಿರುವ ಸಂದರ್ಭದಲ್ಲಿ ಅಸ್ಸಾಮ್ ಯಾವುದೇ ಪ್ರಚೋದನೆ ನಡೆಸದಿದ್ದರೂ‌ ಮೀಝೊರಾಮ್ ಕಡೆಯಿಂದ ಪ್ರಚೋದಿತ ದಾಳಿ ನಡೆದಿದೆ. ಅಸ್ಸಾಮ್’ನ ಆರು ಪೊಲೀಸ್’ನ್ನು ಹತ್ಯೆ ಮಾಡಲಾಗಿದೆ. ಈ ಕುರಿತು ಕೇಂದ್ರ ಮಧ್ಯೆ ಪ್ರವೇಶಿಸಿ ವಿವಾದ ಬಗೆ ಹರಿಸುವಂತೆ ಕೋರಿ ಕೊಂಡಿದ್ದಾರೆ.

Latest Indian news

Popular Stories