ಪ್ರಾಣಿಗಳಿಗೆ ಸೀತಾ, ಅಕ್ಬರ್ ಅಂತಹ ಹೆಸರು ನಾಮಕರಣ ಮಾಡುವುದನ್ನು ತಪ್ಪಿಸಿ: ಹೈಕೋರ್ಟ್

ಕೋಲ್ಕತ್ತ: ಪಶ್ಚಿಮ ಬಂಗಾಳದ ಝೂನಲ್ಲಿ ಸಿಂಹ ಮತ್ತು ಸಿಂಹಿಣಿ ಜೋಡಿಗೆ ಸೀತಾ, ಅಕ್ಬರ್ ಎಂಬ ನಾಮಕರಣ ಮಾಡಿದ್ದು ಇತ್ತೀಚಿಗೆ ವಿವಾದಕ್ಕೆ ಗುರಿಯಾಗಿತ್ತು. ಈ ಬಗ್ಗೆ ಕೋಲ್ಕತ್ತ ಹೈಕೋರ್ಟ್ ವ್ಯಕ್ತಪಡಿಸಿರುವ ಅಭಿಪ್ರಾಯ ಮಹತ್ವ ಪಡೆದುಕೊಂಡಿದೆ. ಕೋಲ್ಕತ್ತಾ ಹೈಕೋರ್ಟ್ ನ ಜಲ್ಪೈಗುರಿ ಸರ್ಕ್ಯೂಟ್ ಪೀಠ, ವಿವಾದಗಳು ಉಂಟಾಗದಂತೆ ತಡೆಯಲು ಪ್ರಾಣಿಗಳಿಗೆ ಸೀತಾ, ಅಕ್ಬರ್ ರೀತಿಯ ಹೆಸರನ್ನು ನಾಮಕರಣ ಮಾಡುವುದನ್ನು ತಪ್ಪಿಸಬೇಕು ಎಂದು ಹೇಳಿದೆ.

ಸಿಂಹ ಅಕ್ಬರ್ ಜೊತೆ ಸಿಂಹಿಣಿ ಸೀತಾ: ಕೋರ್ಟ್ ಮೆಟ್ಟಿಲೇರಿದ VHPಪಶ್ಚಿಮ ಬಂಗಾಳದ ಝೂ ಪ್ರಾಧಿಕಾರಕ್ಕೆ ಈ ಪ್ರಾಣಿಗಳಿಗೆ ಮರು ಹೆಸರು ನಾಮಕರಣ ಮಾಡುವುದನ್ನು ಪರಿಗಣಿಸುವಂತೆ ಸಲಹೆ ನೀಡಿದೆ.

ಸಿಂಹ ಸಿಂಹಿಣಿಗೆ ಅಕ್ಬರ್ ಸೀತಾ ಎಂಬ ಹೆಸರು ನಾಮಕರಣ ಮಾಡಿರುವುದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ನಡೆಯಾಗಿದೆ ಎಂದು ಆರೋಪಿಸಿ ವಿಶ್ವಹಿಂದೂ ಪರಿಷತ್ ಕೋರ್ಟ್ ಮೆಟ್ಟಿಲೇರಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯದ ನ್ಯಾ. ಸೌಗತ ಭಟ್ಟಾಚಾರ್ಯ ಅವರಿದ್ದ ಪೀಠ, ಯಾವುದೇ ಪ್ರಾಣಿಗೆ ದೇವರು, ಪೌರಾಣಿಕ ನಾಯಕ, ಸ್ವಾತಂತ್ರ್ಯ ಹೋರಾಟಗಾರ ಹಾಗೂ ನೊಬೆಲ್ ಪ್ರಶಸ್ತಿ ಪುರಸ್ಕೃತರ ಹೆಸರನ್ನು ನಾಮಕರಣ ಮಾಡಬಹುದೇ? ಎಂದು ಪ್ರಶ್ನಿಸಿದ್ದಾರೆ.

ವಿವಾದಗಳಾಗದಂತೆ ಎಚ್ಚರ ವಹಿಸಲು ಇಂತಹ ಹೆಸರುಗಳನ್ನು ನಾಮಕರಣ ಮಾಡುವುದನ್ನು ಬಿಡಬಹುದು ಎಂದು ನ್ಯಾಯಾಲಯ ಹೇಳಿದೆ.

Latest Indian news

Popular Stories