ಬಾಗಲಕೋಟೆ: ಮನೆಗಳ ಮೇಲೆ ಕಲ್ಲು ತೂರಾಟ: ನಾಲ್ವರ ಬಂಧನ

ಬಾಗಲಕೋಟೆ: ಬಾಗಲಕೋಟೆ ನವನಗರದಲ್ಲಿ ಎರಡು ಮನೆಗಳ ಮೇಲೆ ಕಲ್ಲು ತೂರಾಟ ನಡೆದಿದ್ದು, ಘಟನೆಯಿಂದಾಗಿ ಎರಡು ಕೋಮುಗಳ ನಡುವೆ ಗಲಾಟೆ ನಡೆದಿದು ಎರಡು ಕೋಮಿನವರಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು ಘಟನೆಗೆ ಸಂಬಂಧಿಸಿದಂತೆ ಎರಡು ಗುಂಪುಗಳ ನಾಲ್ವರನ್ನು ಬಂಧಿಸಲಾಗಿದೆ.

IMG 20230623 WA0015 Featured Story, bagalkot


ನವನಗರದ ವಾಂಬೆ ಕಾಲೋನಿಯಲ್ಲಿರುವ 49 ನೇ ಸೆಕ್ಟರ್ನಲ್ಲಿರುವ ಎರಡು ಮನೆಗಳ ಮೇಲೆ ಕಲ್ಲು ತೂರಾಟ ನಡೆದಿದೆ, ಈ ವೇಳೆ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದಿದ್ದು ಎರಡು ಕೋಮುಗಳ ಆರು ಜನರಿಗೆ ಚಿಕ್ಕ ಪುಟ್ಟ ಗಾಯಗಳಾಗಿವೆ ಎನ್ನಲಾಗಿದೆ.


ಬೈಕ್ ವೇಗವಾಗಿ ಓಡಿಸಿದ ಹಿನ್ನೆಲೆಯಲ್ಲಿ ಈ ಗೊಂದಲ ಸೃಷ್ಟಿಯಾಗಿತ್ತು, ಈ ಘಟನೆಯೇ ವಿಕೋಪಕ್ಕೆ ತಿರುಗಿ ದೊಡ್ಡ ಗಲಾಟೆಗೆ ನಾಂದಿಯಾಗಿತ್ತು ಎನ್ನಲಾಗಿದೆ. ನವನಗರದ ಪೊಲೀಸ್ ಸ್ಟೇಶನ್ ಬಳಿ ಹಿಂದು ಸಂಘಟನೆಗಳ ಕಾರ್ಯಕರ್ತರು, ನಿವಾಸಿಗಳು ನೆರೆದಿದ್ದರು. ಆದರೆ ಘಟನೆ ಬಗ್ಗೆ ರಾತ್ರಿಯವರೆಗೂ ಪ್ರಕರಣ ದಾಖಲಾಗಿರಲಿಲ್ಲ.
ಘಟನೆಯಿಂದಾಗಿ ನವನಗರದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣಗೊಂಡಿದೆ. ಬೂದಿ ಮುಚ್ಚಿದ ಕೆಂಡದಂತಿರುವ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಸ್ಥಳದಲ್ಲಿ ನಾಲ್ಕು ಡಿಎಆರ್, ನಾಲ್ಕು ಕೆಎಸ್ಆರ್ಪಿ ತುಕಡಿಗಳು ಮೊಕ್ಕಾಂ ಹೂಡಿದ್ದು, ನಾಲ್ಕು ಜನ ಡಿವೈಎಸ್ಪಿ, ಆರು ಜನ ಸಿಪಿಐ, 15 ಜನ ಪಿಎಸ್ಐ ಸೇರಿದಂತೆ 160 ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿಯೇ ಠಿಕಾಣಿ ಹೂಡಿದ್ದು ಪರಿಸ್ಥಿತಿ ನಿಯಂತ್ರಣದಲ್ಲಿ ತೊಡಗಿದ್ದಾರೆ.


ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿರುವ ಜಿಲ್ಲಾ ಆಸ್ಪತ್ರೆಯಲ್ಲಿಯೂ ಸಹ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

Latest Indian news

Popular Stories