ಉಡುಪಿ: ಸೋಮವಾರ ನಡೆದ ಉಡುಪಿ ಬಾರ್ ಅಸೋಸಿಯೇಷನ್ (ವಕೀಲರ ಸಂಘ)ನ ಚುನಾವಣೆಯಲ್ಲಿ ನೂತನ ಹಿರಿಯ ನ್ಯಾಯವಾದಿ ರೊನಾಲ್ಡ್ ಪ್ರವೀಣ್ ಕುಮಾರ್ ಅತ್ಯಧಿಕ ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಮಿತ್ರ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಾಜೇಶ್ ಎ.ಆರ್, ಜತೆಕಾರ್ಯದರ್ಶಿ
ರವೀಂದ್ರ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸಂತೋಷ ಕುಮಾರ್ ಮೂಡುಬೆಳ್ಳೆ, ಖಜಾಂಜಿಯಾಗಿ
ಗಂಗಾಧರ್ ಎಚ್.ಎಮ್ ಚುನಾಯಿತರಾಗಿದ್ದಾರೆ.