ಶಾಲೆಗೆ ಮಕ್ಕಳನ್ನು ಸೇರಿಸುವ ಮುನ್ನ ಈ ಪಟ್ಟಿ ಪರಿಶೀಲಿಸುವುದನ್ನು ಮರೆಯದಿರಿ!

ಬೆಂಗಳೂರು, ಮೇ 22: ಶಾಲಾ ಶಿಕ್ಷಣ ಮತ್ತು
ಸಾಕ್ಷರತಾ ಇಲಾಖೆಯು ರಾಜ್ಯದಲ್ಲಿರುವ ಅಧಿಕೃತ
ಅನುದಾನರಹಿತ ಶಾಲೆ (ಖಾಸಗಿ ಶಾಲೆ)ಗಳ ಅಧಿಕೃತ ಶಾಲೆಗಳ ಪಟ್ಟಿಯನ್ನು ತನ್ನ ವೆಬ್ಸೈಟ್‌ನಲ್ಲಿ ಪ್ರಕಟಿಸಿದೆ.

ಪ್ರತೀ ಪಟ್ಟಿ ಪ್ರಕಟಿಸಿದ ಜಿಲ್ಲೆಯ – ಶಿಕ್ಷಣ ಇಲಾಖೆ
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವ್ಯಾಪ್ತಿಯಲ್ಲಿರುವ ಶಾಲೆಗಳ ಪಟ್ಟಿಯನ್ನು ವೆಬ್‌ಸೈಟ್‌ನಲ್ಲಿ ಈಗಾಗಲೇ ಅಪ್‌ಲೋಡ್ ಮಾಡಲಾಗಿದೆ.

ಮಕ್ಕಳನ್ನು ಶಾಲೆಗೆ ಸೇರಿಸುವ ಮುಂಚಿತವಾಗಿ ಈ ಪಟ್ಟಿಯನ್ನು ಪರಿಶೀಲಿಸುವಂತೆ ಶಿಕ್ಷಣ ಇಲಾಖೆ ಪಾಲಕರಲ್ಲಿ ಮನವಿ ಮಾಡಿದೆ. ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ನೀಡಿರುವ ಮಾಹಿತಿಯನ್ನು ಕ್ರೋಡೀಕರಿಸಿರುವ ಶಿಕ್ಷಣ ಇಲಾಖೆಯು ತನ್ನ https://schooleducation.karnataka.gov.in/ ನಲ್ಲಿ ಅಧಿಕೃತ ಶಾಲೆಗಳ ಪಟ್ಟಿಯನ್ನು ಪ್ರಕಟಿಸಿದೆ.

ಕ್ಯಾಪಿಟೇಷನ್ ಶುಲ್ಕ ಪಡೆಯಲು ಅವಕಾಶವಿಲ್ಲ:

ಖಾಸಗಿ ಅನುದಾನ ರಹಿತ ಶಾಲೆಗಳು ತಾವು ನಿಗದಿಪಡಿಸಿದ ಶುಲ್ಕದ ವಿವರವನ್ನು ಬಹಿರಂಗ ಪಡಿಸಬೇಕು ಮತ್ತು ಕ್ಯಾಪಿಟೇಷನ್ ಶುಲ್ಕ ಪಡೆಯಲು ಅವಕಾಶವಿಲ್ಲ ಎಂದು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.

ಶಿಕ್ಷಣ ಹಕ್ಕು ಕಾಯ್ದೆ-2009ರಡಿ ಎಲ್ಲ ಖಾಸಗಿ ಶಾಲೆಗಳು ತಾವು ವಿಧಿಸುವ ಶುಲ್ಕದ ಮಾಹಿತಿಯನ್ನು ತಮ್ಮಶಾಲಾ ಜಾಲತಾಣದಲ್ಲಿ ಶಾಲಾ ಸೂಚನ ಫಲಕದಲ್ಲಿ ಮತ್ತು ಇಲಾಖಾ ಜಾಲತಾಣದಲ್ಲಿ ಪ್ರಕಟಿಸಬೇಕೆಂದು ಸೂಚಿಸಲಾಗಿದೆ. ಅದೇ ರೀತಿ ಶಿಕ್ಷಣ
ಹಕ್ಕು ಕಾಯ್ದೆಯಡಿ ಕ್ಯಾಪಿಟೇಷನ್ ಶುಲ್ಕ ವಿಧಿಸಲು
ಅವಕಾಶವಿಲ್ಲ. ಶಾಲೆ ಅಧಿಸೂಚಿಸಿದ ಶುಲ್ಕವನ್ನು
ಮಾತ್ರ ಸಂಗ್ರಹಿಸಬೇಕೇ ಹೊರತು ಇನ್ಯಾವುದೇ
ಮಾದರಿಯಲ್ಲಿ ಶುಲ್ಕ ವಸೂಲಿ ಮಾಡುವಂತಿಲ್ಲ
ಎಂದು ಶಾಲಾ ಶಿಕ್ಷಣ ಇಲಾಖೆ ಹೇಳಿದೆ.

Latest Indian news

Popular Stories